ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಜಕ್ಕಳ್ಳಿ ಸಮೀಪ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್ ಗೆ ಬೆಂಕಿ ತಗಲಿ, ಲಕ್ಷಾಂತರ ರೂಪಾಯಿ ವೆಚ್ಚದ ಗುಜುರಿ ಸಾಮಾನುಗಳು ಬೆಂಕಿಯ ಕೆನ್ನಾಲಿಗೆಯಿಂದ ನಾಶವಾಗಿದೆ.

ದಿಡೀರ್ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಲೀಕ ಜಫ್ರುಲ್ಲಾ ಅವರು ಅಗ್ನಿಶಾಮಕ ದಳ ಕಚೇರಿಗೆ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ಆಗಮಿಸಿದ, ಕೋಟೆ ಸರಗೂರು ತಾಲೂಕಿನ ಎರಡು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ನಿರಂತರವಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ನಿರಂತರವಾಗಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಆದರೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗುಜರಿ ಸಾಮಾನುಗಳು ಬೆಂಕಿಯ ಕೆನ್ನಾಲಿಗೆ ನಾಶವಾಗಿದೆ. ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಎಂಜಿ ಸೋಮಣ್ಣ ಮಾತನಾಡಿದರು.

ಕಾರ್ಯಾಚರಣೆಯಲ್ಲಿ ಸಾಹಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಎಂ.ಜಿ. ಸೋಮಣ್ಣ, ಪ್ರಮುಖ ಅಗ್ನಿಶಾಮಕರುಗಳಾದ ಅಶೋಕ್, ಮಂಜು, ರವಿ, ಚಾಲಕರುಗಳಾದ ಹೇಮಂತ್ ಕುಮಾರ್, ಸುನಿಲ್ ಕುಮಾರ್, ಅಗ್ನಿಶಾಮಕರುಗಳಾದ ಅರುಣ್ ಕುಮಾರ್, ಮುನಿಸಿದ್ದ ನಾಯಕ, ಪ್ರಕಾಶ, ಎಲ್ಲಪ್ಪ ಪುಂಡಲಿಕ, ರಾಹುಲ, ಬಾಲಕೃಷ್ಣ, ಹಾಜರಿದ್ದರು.