ಮೈಸೂರು: ಗೂಡ್ಸ್ ವಾಹನ ಪಲ್ಟಿಯಾಗಿ 13 ಕೂಲಿ ಕಾರ್ಮಿಕರಿಗೆ ಗಾಯಗೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಸಂಜೀವನಿ ನಗರದ ಬಳಿ ನಡೆದಿದೆ. ಸಿಬಿಟಿ ಕಾಲೋನಿಯ ಚಿಕ್ಕಣ್ಣ, ಪಾರ್ಥ, ಕುಮುದ, ಮಂಜುಳ, ಪಾರ್ವತಿ, ಚಿನ್ನಮುತ್ತಮ್ಮ, ತರಿಕಲ್ನ ವಳ್ಳಿಯಮ್ಮ,ರಾಣಿ, ಮಹದೇವಮ್ಮ, ಮಂಗಳಗೆ ಗಾಯಗೊಂಡವರು.
ಗಾಯಾಳುಗಳು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಮಂದಿ ಹುಣಸೂರಿನ ಕಾವೇರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಿಂದ ಎಚ್.ಡಿ.ಕೋಟೆ ತಾಲೂಕು ಹ್ಯಾಂಡ್ ಪೋಸ್ಟ್ಗೆ ಕಾರ್ಮಿಕರು ತೆರಳಿದ್ದರು. ಪ್ರಕರಣ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

