ನಂಜನಗೂಡು: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಶ್ರೀ ಶನೇಶ್ವರಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ ಆ.16 ರಂದು ಶನಿವಾರ ನಡೆಯಲಿದೆ.

ಅಂದು ಬೆಳಿಗ್ಗೆ 5:30 ರಿಂದ ಸ್ವಾಮಿಗೆ ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಅನುವು ಮಾಡಿಕೊಳ್ಳಲಾಗುತ್ತದೆ.  ಜಾತ್ರಾ ಮಹೋತ್ಸವದಲ್ಲಿ ಬದನವಾಳು ಶ್ರೀ ಶಿವಕುಮಾರಶಾಸ್ತ್ರೀ ತಂಡದಿಂದ ಹರಿಕಥೆಯನ್ನು ಏರ್ಪಡಿಸಲಾಗಿದೆ.

ಬೆಳಿಗ್ಗೆ 11 ಗಂಟೆಯಿಂದಲೇ ಸುಮಾರು 15 ಸಾವಿರ ಭಕ್ತಾದಿಗಳಿಗೆ ಅನ್ನ ದಾಸೋಹದ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ , ದೇವರ ಕೃಪೆಗೆ ಪಾತ್ರ ರಾಗುವಂತೆ ದೇವಾಲಯದ ಪ್ರಧಾನ ಅರ್ಚಕರಾದ ಗುಡ್ಡಪ್ಪ ಮಹೇಶ್ ಮತ್ತು ಗ್ರಾಪಂ ಸದಸ್ಯರಾದ ಸುರೇಶ್ ರವರು ತಿಳಿಸಿದ್ದಾರೆ.