ಮೈಸೂರು : ಕಾಡು ಪ್ರಾಣಿ ಹಾವಳಿ ಮುಂದುವರೆದಿದ್ದು,  ಚಿರತೆ ದಾಳಿಗೆ ಮೇಕೆಗಳು ಬಲಿಯಾದ ಘಟನೆಹುಣಸೂರು ತಾಲ್ಲೂಕು ಹಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಡೈರಿ ಅಧ್ಯಕ್ಷರಾದ ಚಿಕ್ಕತಿಮ್ಮೇಗೌಡರ ಎರಡು ಮೇಕೆಗಳು ಬಲಿಯಾಗಿವೆ. ಸುಮಾರು 50 ಸಾವಿರ ಮೌಲ್ಯದ ಆಡುಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.