ನಂಜನಗೂಡು : ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವು ಜೂ.23-2026 ರಿಂದ ಜೂ.30-2026 ರವರೆಗೆ ನಡೆಯಲಿದೆ. ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವು ದಿನಾಂಕ 23-06-2026 ರಂದು ಮಂಗಳವಾರ ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ ನಡೆಯಲಿದೆ.
24-06-2026ರಂದು ಬುಧವಾರ ಸಂಜೆ 5 ಗಂಟೆಗೆ ಕಾಶಿ ಯಾತ್ರಾ ಮಹೋತ್ಸವ ಮತ್ತು ಸಂಜೆ 6:45 ರಿಂದ 7:15 ಗಂಟೆಯೊಳಗೆ ಸಲ್ಲುವ ಶುಭ ಧನು ಲಗ್ನದಲ್ಲಿ ಧಾರಾ ಮಹೋತ್ಸವ ನಡೆಯಲಿದೆ. 28-6-2026 ಭಾನುವಾರ, 29-6-2026 ಸೋಮವಾರ ಹಾಗೂ 30-6-2026 ರಂದು ಮಂಗಳವಾರ ಮೂರು ದಿನಗಳ ಕಾಲ ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ತಪೋತ್ಸವ ಜರುಗಲಿದೆ.
ಜೂ.23-2026 ರಿಂದ ಜೂ.30-2026 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಭಕ್ತ ಮಹಾಶಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕಂಠೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಲು ಕೋರಿದ್ದಾರೆ.

