ಮೈಸೂರು: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಹಿರಿಯ ಶ್ರೀಗಳಾದ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳು ಭಾರತೀಯ ಸೇನೆಗೆ ಸಿಂಧೂರ ಯಶಸ್ಸಿನ ಹಿನ್ನಲೆಯಲ್ಲಿ 25 ಲಕ್ಷ ಹಣವನ್ನು ದೇಣಿಗೆ ನೀಡಿದ್ದಾರೆ.

ಆಶ್ರಮದಲ್ಲಿರುವ ದತ್ತ ವೆಂಕಟೇಶ್ವರ ಬ್ರಹ್ಮೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಶ್ರೀ ಗಳು ಕಿರಿಯ ಶ್ರೀಗಳ ಸಮ್ಮುಖದಲ್ಲಿ 25 ಲಕ್ಷ ಹಣದ ಚೆಕ್ ನ್ನು ಭಾರತೀಯ ಸೇನೆ ನೀಡಲಾಯಿತು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯಧುವೀರ ಕೃಷ್ಣದತ್ತ ಓಡೆಯರ್ ಅವರಿಗೆ 25 ಲಕ್ಷ ಹಣದ ಚೆಕ್ ನ್ನು ಸ್ವಾಮೀಜಿಗಳು ನೀಡಿದರು.

ಸಂಸದರು ಸ್ವಾಮೀಜಿಗಳು ನೀಡಿದ ಹಣದ ಚೆಕ್ ನ್ನು ಭಾರತ ಸರ್ಕಾರಕ್ಕೆ ತಲುಪಿಸಲಿರುವುದು ವಿಶೇಷ.. ಧಾರ್ಮಿಕ ಕ್ಷೇತ್ರಗಳಿಂದ ಇದು ಮೊದಲ ಹೆಜ್ಜೆಯಾಗಿದ್ದು, ಅಪರೇಶನ್ ಸಿಂಧೂರ್ ಕಾರ್ಯಚರಣೆ ಯಶಸ್ವಿಯಾದ ನಂತರ ದೇಶದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ದೇವರುಗಳಿಗೆ ವಿಶೇಷವಾದ ಪೂಜೆ ,ಹೊಮ, ಹವನ ಇನ್ನು ಅನೇಕ ಕಾರ್ಯಗಳನ್ನು ಮಾಡಿದರು ಆದರೆ ಇದೇ ಮೊದಲ ಭಾರಿಗೆ ಆಶ್ರಮವೊಂದು ಭಾರತೀಯ ಸೈನಿಕರ ಅತ್ಮಸ್ಥೈರ್ಯ ಹೆಚ್ಚು ಮಾಡವುದಕ್ಕೆ ಹಣವನ್ನು ದೇಣಿಗೆ ನೀಡಲಾಗಿದೆ.