ಮೈಸೂರು : ಬರ್ತ್ ಡೇ ಸೆಲೆಬ್ರೇಷನ್ ಗೆ ಕರೆಸಿಕೊಂಡು ಸ್ನೇಹಿತರು ಚಾಕು ಇರಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ‌ ಗ್ರಾಮದಲ್ಲಿ ನಡೆದಿದೆ.

ಕಿರಣ್ ಎಂಬ ಯುವಕನ ಮೇಲೆ ಮಾರಣಾಂತಿಕ‌ ಹಲ್ಲೆ ನಡೆಸಲಾಗಿದೆ. ರವಿಚಂದ್ರ ಎಂಬವನ ಬರ್ತ್ ಡೇ ಗೆ ಕಿರಣ್ ತೆರಳಿದ್ದನು. ಯುವತಿ ವಿಚಾರಕ್ಕೆ ಮನಸೋ ಇಚ್ಛೆ ಥಳಿಸಿ, ಚಾಕು‌ ಇರಿದಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು- ಬದುಕಿನ ನಡುವೆ ಕಿರಣ್ ಹೋರಾಟ ನಡೆಸುತ್ತಿದ್ದಾರೆ. ವಸಂತ, ಮಧು, ಅಭಿ, ಸಿದ್ದರಾಜು ಎಂಬವರಿಂದ ದಾಳಿ ನಡೆಸಲಾಗಿದೆ.

ಬರ್ತ್‌ ಡೇ ಬಾಯ್‌ ರವಿಚಂದ್ರನಿಂದಲೂ ಹಲ್ಲೆ ನಡೆಸಲಾಗಿದೆ. ಮನೆಗೆ ವಾಪಸ್ ಹೋಗಲು ಬಿಡದೆ ಬೈಕ್ ಗೆ ಡಿಕ್ಕಿ‌ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ತಮ್ಮನಿಗೆ ಕರೆ ಮಾಡಲು ಮುಂದಾದ ಮತ್ತಷ್ಟು ಕ್ರೂರತ್ವವನ್ನು ಆತ್ಮೀಯರು ತೋರಿಸಿದ್ದಾರೆ. ಮೊಬೈಲ್ ಕಸಿದುಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ಕ್ರೂರತ್ವವನ್ನು ಸ್ನೇಹಿತರು ಮೆರೆದಿದ್ದಾರೆ.