ತಿ. ನರಸೀಪುರ: ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಪಟ್ಟಣದ ಲಿಂಕ್ ರಸ್ತೆಯ ಮಸ್ಜಿದ್ -ಎ-ನೂರ್ ಆವರಣದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಮನ್ಸೂರ್ ಆಲಿ ಅಧ್ಯಕ್ಷತೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಅಲ್-ಅನ್ಸಾರ್ ಆಸ್ಪತ್ರೆ ಮೈಸೂರುಮತ್ತು ವ್ಯವಸ್ಥಾಪನ ಸಮಿತಿ ಮಸ್ಜಿದ್-ಎ-ನೂರ್ ಟಿ. ನರಸೀಪುರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅಲ್- ಅನ್ಸಾರ್ ಆಸ್ಪತ್ರೆಯ ವೈದ್ಯರುಗಳಾದ ಡಾ.ಉಮ್ಮಿ ಅನಿ, ಡಾ. ತಸ್ಮಿಯ ಖಾನಮ್, ಡಾ.ಸಮೀರ್ ಅಮ್ಜದ್ ಶಾಯಿಕ್, ತಾಲಿಬ್ ಸುಭಾನ್, ಯಾಸ್ಮಿನ್ , ಅಲ್ಮಶ್, ನೇಹಾ ಕೌಶರ್,
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಡಾ.ಮನ್ಸೂರ್ ಅಲಿ (ಎಚ್.ಸಿ.ಎಂ) ಕಾರ್ಯದರ್ಶಿ ಸಯೀದ್ ಪಾಷ, ಖಜಾಂಚಿ ನಾಯಜ್ ಅಹಮದ್, ಸದಸ್ಯರಾದ ಮನ್ಸೂರ್ ಅಹಮದ್, ಅಲ್ತಾಪ್ ಪಾಷ, ಇನಾಯತ್, ಅಕ್ಬರ್ ಪಾಷ, ರಿಯಾಜ್ ಅಹಮದ್, ಇನ್ನಿತರರು ಹಾಜರಿದ್ದರು.

