ಮೈಸೂರು: ತಿ. ನರಸೀಪುರ ತಾಲ್ಲೂಕಿನ ಬನ್ನೂರಿನ ರೋಟರಿ ಸಂಸ್ಥೆಯ ಆವರಣದಲ್ಲಿ ಕಾನ್ಸಿಂಗ್ಜೀ ರಾಜ್ಪುರೋಹಿತ್ ರವರ ಸ್ಮರಣಾರ್ಥವಾಗಿ ಮೈಸೂರು ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕಾನ್ ಸಿಂಗ್ ರಾಜ್ ಪುರೋಹಿತ್ ರವರ ಮಕ್ಕಳಾದ ಬನ್ನೂರಿನ ಸಮಾಜ ಸೇವಕ ಡಾ. ಕೆ. ಮಹೇಂದ್ರ ಸಿಂಗ್ ಕಾಳಪ್ಪ ಮತ್ತು ಕೆ. ರಾಜೇಶ್ಕುಮಾರ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ಡಾ.ಮಹೇಂದ್ರ ಸಿಂಗ್ ಕಾಳಪ್ಪ ಅವರು ನಮ್ಮ ತಂದೆಯ ಸ್ಮರಣಾರ್ಥಕವಾಗಿ ಸತತ 17 ವರ್ಷಗಳಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ ಮೈಸೂರು ಮಂಡ್ಯ ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಜನರಿಗೆ ಉಚಿತವಾಗಿ ತಪಾಸಣೆ ಮಾಡಿ ಸಮಸ್ಯೆಗಳಿದ್ದರೆ ಶಸ್ತ್ರ ಚಿಕಿತ್ಸೆ ಮಾಡಿಸಿ ಉಚಿತವಾಗಿ ಕನ್ನಡಕವನ್ನು ಕೂಡ ನೀಡುತ್ತಿದ್ದೇವೆ ಯಾವುದೇ ತರದ ಕಣ್ಣಿನ ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿ ಅನುಕೂಲವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌರಿ ದೇವಿ, ಕೊಯಮತ್ತೂರು ಅರವಿಂದ್ ಆಸ್ಪತ್ರೆಯ PRO ವಿಜಯಾ ಕಾಂತ್, ಡಾಕ್ಟರ್ಯಾಸೀನ್ ಪಾಟೀಲ್, ಡಾಕ್ಟರ್ ಚಿನ್ಮಯಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಯೋಗೇಂದ್ರ, ನಂಜುಂಡಸ್ವಾಮಿ, ರೋಟರಿ ಸಂಸ್ಥೆಯ ಮುಖ್ಯ ಶಿಕ್ಷಕ ಲೋಕೇಶ್,ಮಾನಸ , ಪಂಚಲಿಂಗೇಗೌಡ ಹಾಜರಿದ್ದರು.

