ಮೈಸೂರು: ಮೈಸೂರಿನ ಕ್ಯಾತಮಾರಹಳ್ಳಿ ಮಸೀದಿ ರೀಓಪನ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ರಾಜು ಹತ್ಯೆ ಬಳಿಕ ಅನಧಿಕೃತ ಮಸೀದಿ ಬಂದಾಗಿತ್ತು.

ಈಗ ರೀಓಪನ್ ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಹಿನ್ನಲೆ ರೆಸಿಡೆನ್ಸಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮಸೀದಿಯನ್ನು ರೀಓಪನ್‌ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಚಾಲೆಂಜ್ ಮಾಡಿ ಹೇಳುತ್ತೇನೆ. ನಾನೊಬ್ಬ ಬಿಜೆಪಿ ಕಾರ್ಯಕರ್ತನಾಗಿ ಚಾಲೆಂಜ್ ಮಾಡುತ್ತೇನೆ ಎಂದರು.

ತಾಕತ್ತಿದ್ದರೆ ಓಪನ್ ಮಾಡಿ ನೋಡಿ ಅದು ರಾಜು ಹತ್ಯಯಾದ ಬಳಿಕ ಬಂದಾಗಿದೆ. ಈಗ ಅದನ್ನ ಓಪನ್ ಮಾಡೋಕೆ ಅಷ್ಟು ಸುಲಭವಾಗಿ ಬಿಡಲ್ಲ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ ಗಲಭೆ ದೊಂಬಿಯಲ್ಲಿ ಭಾಗಿಯಾಗಿದ್ದ 1600 ದುರುಳರ ವಿರುದ್ಧ 175 ಪ್ರಕರಣಗಳನ್ನ ಖುಲಾಸೆ ಮಾಡಿದೆ.

ಪ್ರಕರಣ ವಾಪಸ್ ತೆಗೆದುಕೊಂಡು ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕುಟ್ಟಪ್ಪ ಹತ್ಯ, ಬೆಂಗಳೂರು ರದ್ರೇಶ್ ಹತ್ಯೆ,ಮೈಸೂರಿನಲ್ಲಿ ರಾಜು ಹತ್ಯ ಆಯಿತು. ರಾಜು ಹತ್ಯೆ ಆದ ಬಳಿಕ ಮಸೀದಿ ಬಂದ್ ಮಾಡಿಸಿದ್ದೆವು‌. ಇವತ್ತು ಸಿದ್ದರಾಮಯ್ಯ ಅವರು ಬಂದಮೇಲೆ ಬಂದ್ ಆಗಿರುವ ಮಸೀದಿಯನ್ನ ಓಪನ್ ಮಾಡಲು ಮುಂದಾಗಿದ್ದಾರೆ. ಈ ವಿಚಾರದ ಬಗ್ಗೆ ಚರ್ಚೆ ಮಾಡಲುಡಿಸಿ ಕಚೇರಿಯಲ್ಲಿ ಸಭೆ ಕರೆದಿದ್ದಾರೆ.

ಪೂರಕ ದಾಖಲೆಗಳ ದಾಖಲೆಗಳನ್ನ ತೆಗೆದುಕೊಂಡ ಸಭೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ರೆಸಿಡೆನ್ಸಿ ಸೈಟ್ ನಲ್ಲಿ ಮಸೀದಿ ಮಾಡಿರುವುದೇ ಮೊದಲನೇ ತಪ್ಪು. ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೀತಾ ಇದೆ. ದಾಖಲೆ ನಾವು ಯಾಕೆ ಕೊಡಬೇಕು.?. ಇದನ್ನ ನಾವು ಖಂಡಿಸುತ್ತೇವೆ. ಆ ಮಸೀದಿ ತರೆಸಲಿಕ್ಕೆ ಬಿಡಲ್ಲ. ನಿಮ್ಮ ಉದ್ದೇಶ ಏನು? ನಿಮಗೆ ಸಾಬ್ರ ವೋಟ್ ಬಿಟ್ಟರೆ ಬೇರೆಯವರ ವೋಟ್ ಬೇಡವಾ.?. 5 ವರ್ಷ ಏನೂ ಮಾಡಕ್ಕಾಗಲ್ಲ ಅಂದುಕೊಂಡಿದ್ದೀರಾ..?. ಮಸೀದಿ ರೀಓಪನ್ ವಿಚಾರವಾಗಿ ಸಿಎಂ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.