ಮೈಸೂರು : ಸಚಿವ ಸಂತೋಷ್ ಲಾಡ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ. ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆ ಥರ ಕಾಕಾ ಥರ ಮಾತಾಡುತ್ತಾರೆ. ಲಾಡ್ ನೀವು ಏನ್ ಮಾತಾಡ್ತಿದ್ದಿರಿ ಅನ್ನೋ ಜ್ಞಾನ ನಿಮಗೆ ಇದ್ಯಾ…?. ಮೋದಿ ಬಗ್ಗೆ ಮಾತಾಡದೆ ಇದ್ದರೆ ಲಾಡ್ಗೆ ತಿಂದಿದ್ದು ಕರಗುವುದಿಲ್ಲ ಎಂದರು.
ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ರೀತಿ ಮಾತು ಬರುತ್ತಿಲ್ಲ. ಅಫ್ಜಲ್ ಖಾನ್ ರೀತಿ ಮಾತು ಬರುತ್ತಿದೆ. ಸಂತೋಷ್ ಲಾಡ್ ನೀವೇನೂ ಬಹಳ ಮೇಧಾವಿನಾ. ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ…? ಹತ್ಯೆ ಮಾಡಿದವನ ಏನ್ ಕೌಂಟರ್ಗೆ ಮೋದಿ ಅನುಮತಿ ಏಕೆ ಬೇಕು ಲಾಡ್…?.
ಒಂದು ವರ್ಷವಾಯ್ತು ನೇಹಾಗೆ ನ್ಯಾಯ ಕೊಡಿಸಿದ್ರಾ…?, ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನ್ ಆಯ್ತು…? ಮೋದಿಗೆ ಹೇಳಿ ಕೊಡುವಷ್ಟು ನೀವು ಬುದ್ದಿವಂತರಾ…? 1971 ರಲ್ಲಿ ಇಂದಿರಾಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು. ಅವತ್ತಿನ ಯುದ್ದದ ಗೆಲುವನ್ನು ಹಾಳು ಮಾಡಿದ್ದು ನಿಮ್ಮ ಇಂದಿರಾಗಾಂಧಿ, ಅದು ನೆನಪಿರಲಿ ಎಂದರು.
ಸಂತೋಷ್ ಲಾಡ್ ಕನಿಷ್ಠ ಪರಿಜ್ಞಾನ ಇಟ್ಟುಕೊಂಡು ಮಾತಾಡಿ. ಪಹಲ್ಗಾನ್ ನಿಂದ ಕನ್ನಡಿಗರನ್ನು ಕರೆದು ಕೊಂಡು ಬರಲು ಅವಕಾಶ ಮಾಡಿ ಕೊಟ್ಟಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ ಲಾಡ್ ? . ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಅನ್ನೋ ರೀತಿ ಯಾಕೆ ಮಾತಾಡ್ತಿರಿ?. ಪಾಕಿಸ್ತಾನ ಮಾತ್ರ ಶತ್ರು ಅಲ್ಲ. ನಮ್ಮ ಜೊತೆಯಲ್ಲೆ ಇಂತಹ ಹಿತಶತ್ರುಗಳು ಟೈಂ ಬಾಂಬ್ ಥರ ಇದ್ದಾರೆ.
ಸಂತೋಷ್ ಲಾಡ್ ಗೆ ಮೈ ತುಂಬಾ ಮೈನಿಂಗ್ ದುಡ್ಡು ಅಂಟಿ ಕೊಂಡಿದೆ. ಹೊರಗಡೆ ಮಾತ್ರ ತಾನೂ ಬಹಳ ಸಾಚಾ ಅನ್ನೋ ರೀತಿ ಪೋಸ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮೂಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡುಬೇಕಿತ್ತು.
ದುಡ್ಡಿನ ಕೊಬ್ಬಿನಿಂದ ಲಾಡ್ ಮಾತಾಡ್ತಿದ್ದಾರೆ. ನಿಮಗೆ ದುಡ್ಡು ಇರಬಹುದು ಪತ್ರಕರ್ತರಿಗೆ ನೈತಿಕತೆ ಇದೆ. ನೆನಪಿಟ್ಟು ಕೊಳ್ಳಿ ಲಾಡ್. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಕಾಂಗ್ರೆಸ್ಗೆ ಪಾಕಿಸ್ತಾನದ ಮೇಲೆ ಸದಾ ಪ್ರೀತಿ. ಕಾಂಗ್ರೆಸ್ ಪಾಕಿಸ್ತಾನದ ಪಿತಾಮಹ ಅದಕ್ಕೆ ಪ್ರೀತಿ ಎಂದರು.

