ಮೈಸೂರು : ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕೊತ್ತನೂರು ಮಂಜು ಗೆ ಸಿಂಧೂರಕ್ಕೂ ಸಿಂಧೂರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಸಿಂಧೂರ, ಸಿಂಧೂರಿ ಅಂತಾ ಏನೇನೋ ಕಲ್ಪಿಸಿ ಕೊಂಡು ಕನವರಿಸುತ್ತಿದ್ದಾರೆ ಎಂದರು.
ಮಂಜುನಾಥ್ ಗೆ ಭೂಮಿಯ ಚದರ ಅಡಿ ಮಾತ್ರ ಗೊತ್ತಿರೋದು. ಒಂದ್ ಸೈಟ್ ನಾಲ್ಕು ಜನಕ್ಕೆ ಮಾರಿ ದುಡ್ಡು ಮಾಡೋದಷ್ಟೆ ಗೊತ್ತು. ಕೊತ್ತನೂರು ಮಂಜುನಾಥ್ ನಿಮಗೆ ದೇಶ, ಯುದ್ದ ಇದೆಲ್ಲ ನಿಮಗೆ ಅರ್ಥವಾಗಲ್ಲ. ಸುಮ್ಮನೆ ಇರಿ ಎಂದರು.

