ಮೈಸೂರು: ಬದುಕಿರುವ ವೃದ್ದೆಯನ್ನ ಪಡಿತರ ಚೀಟಿ ದಾಖಲೆಯಲ್ಲಿ ಡೆತ್ ಎಂದು ತಿದ್ದಿಪಡಿ ಮಾಡಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫುಡ್ ಇನ್ಸ್ಪೆಕ್ಟರ್ ಮಾಡಿದ ಎಡವಟ್ಟಿಗೆ ವೃದ್ದೆ ಪಡಿತರದಿಂದ ವಂಚಿತಳಾಗಿ ಕಂಗಾಲಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಹೋದರೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಧರ್ಮಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ಪಡಿತರದಾರರಾದ ವೃದ್ದೆ ಮರಮ್ಮ ಗೆ ಇಂತಹ ಅನ್ಯಾಯ ಆಗಿದೆ.ಎಂದಿನಂತೆ ಮರಮ್ಮ ರೇಷನ್ ಪಡೆಯಲು ಹೋದಾಗ ಶಾಕ್ ಆಗಿದೆ. ಮರಮ್ಮ ಬದುಕಿದ್ದರೂ ಡೆತ್ ಎಂದು ಸ್ಟೇಟಸ್ ನಲ್ಲಿ ತಿದ್ದುಪಡಿ ಆಗಿದೆ.ಹೀಗಾಗಿ ಮರಮ್ಮ ಪಡಿತರದಿಂದ ವಂಚಿರಾಗಿದ್ದಾರೆ.

ಶರವಣ ಎಂಬ ಆಹಾರ ನಿರೀಕ್ಷಕ ಮಾಡಿದ ಎಡವಟ್ಟು ಎಂದು ಮರಮ್ಮ ಮಗಳು ಆರೋಪಿಸಿದ್ದಾರೆ.ಬದುಕಿದ್ದರೂ ಸಾಯಿಸಿದ ಆಹಾರ ನಿರೀಕ್ಷಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಮರಮ್ಮ ಮಗಳು ಆಗ್ರಹಿಸಿದ್ದಾರೆ.

ಡೆತ್ ಎಂದು ತಿದ್ದುಪಡಿ ಮಾಡಲು ಯಾವ ದಾಖಲೆ ಬಳಸಿದ್ದಾರೆಂದು ಪರಿಶೀಲಿಸಲು ತೆರಳಿದ ಮಾಧ್ಯಮದವರ ಕೈಗೂ ಸಿಗದ ಶರವಣ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.ಡೆತ್ ಎಂದು ನಮೂದಿಸಲು ಯಾವ ಮರಣ ಪ್ರಮಾಣ ಪತ್ರ ಬಳಸಿದ್ದಾರೆ ನಿಗೂಢವಾಗಿದೆ. ಒಟ್ಟಾರೆ ಶರವಣ ಮಾಡಿದ ಎಡವಟ್ಟಿಗೆ ವೃದ್ದೆ ಮರಮ್ಮ ಪರಿಪಾಟಲು ಪಡುತ್ತಿದ್ದಾರೆ.