ನಂಜನಗೂಡು : ರಾಜ್ಯದ ಶಕ್ತಿ ಕೇಂದ್ರ ಎಂದೇ ಹೆಸರುವಾಸಿಯಾಗಿರುವ ವಿಧಾನಸೌಧದ ಅಧಿವೇಶನದ ಕಲಾಪದಲ್ಲಿ ಕಾನೂನು ಮಂತ್ರಿಯಾಗಿರುವ ಎಚ್ ಕೆ ಪಾಟೀಲ್ ಸಹಕರ ಸಂಘಗಳ ವಿದೇಯಕ ಮಂಡನೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಹಿಳೆಯರಿಗೆ ನಿರ್ದೇಶಿತ ಸದಸ್ಯರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ವಿಧೇಯಕ ಮಂಡಿಸಿದರು.
ಸಹಕಾರ ಸಂಘಗಳಲ್ಲಿ ಅನುಕೂಲಕರವಾದ ವಿಧೇಯಕ ಮಂಡನೆಗೆ ಶಾಸಕ ಜಿಟಿ ದೇವೇಗೌಡ ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶಾಸಕ ಜಿಟಿ ದೇವೇಗೌಡಗೆ ಶೋಭೆ ತರುವಂತದ್ದಲ್ಲ ರಾಜ್ಯದಲ್ಲಿ ಸಾಕಷ್ಟು ಬಾರಿ ಶಾಸಕರಾಗಿ ಸಚಿವರಾಗಿ ಅನುಭವಿ ರಾಜಕೀಯ ನಾಯಕರು ಆಗಿರುವ ಜಿಟಿ ದೇವೇಗೌಡ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಎಂದು ಆರೋಪಿಸಿ ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್ ಮಾತನಾಡಿ ಎಲ್ಲಾ ಜಾತಿ ಜನಾಂಗದವರ ಮತಗಳನ್ನು ಪಡೆದು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿ ಮೀಸಲಾತಿಯ ಬಗ್ಗೆ ಅರಿವಿಲ್ಲದವರಂತೆ ಶಾಸಕ ಜಿಟಿ ದೇವೇಗೌಡ ವರ್ತಿಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳೆಯರಿಗೆ ಅವಕಾಶ ಕಲ್ಪಿಸಿದರೆ ಸಹಕಾರ ಸಂಘಗಳನ್ನು ಮುಚ್ಚ ಬೇಕಾಗುತ್ತದೆ ಎನ್ನುವ ಇವರ ಜಾತಿ ಗ್ರಸ್ತ ಮನಸ್ಸನ್ನು ತಿಳಿಯಾಗಿಸಿಕೊಳ್ಳಬೇಕಿದೆ. ಹಣ ಸಂಪತ್ತು ಅಧಿಕಾರದ ಧರ್ಪದಲ್ಲಿ ಮೆರೆಯುತ್ತಿರುವ ಇಂಥವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹಿಗ್ಗ ಮಗ್ಗ ವಾಗ್ದಾಳಿ ನಡೆಸಿದರು.
ಇದುವರವಿಗೆ ರಾಜ್ಯದಲ್ಲಿ ಮುಚ್ಚಿರುವ ಸಹಕಾರ ಸಂಘಗಳಲ್ಲಿ ಎಷ್ಟೆಷ್ಟು ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ಹಾಗೂ ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎನ್ನುವ ಅರಿವಿಲ್ಲದೆ ಅಧಿಕಾರದ ನಶೆಯನ್ನು ತಲೆಗೇರಿಸಿಕೊಂಡು ದಲಿತ ಸಮುದಾಯಗಳನ್ನು ಅವಮಾನಿಸಿ ದುರಂಕಾರದ ಮಾತುಗಳನ್ನ ಆಡಿರುವ ಜಿ ಟಿ ದೇವೇಗೌಡರ ಮೇಲೆ ಸಭಾಧ್ಯಕ್ಷರಾದ ಯು ಟಿ ಖಾದರ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

