ಮೈಸೂರು : ಸಿಎಂ ತವರಲ್ಲಿ ಭ್ರೂಣ ಹತ್ಯೆ ಕುಕೃತ್ಯ ನಡೆದಿದ್ದು, ಭ್ರೂಣ ಹತ್ಯೆ ನಡೆಸುತ್ತಿದ್ದವರನ್ನ ಪೊಲೀಸರು  ಬಂಧಿಸಿರುವ ಘಟನೆ ಮೈಸೂರು ತಾಲೂಕಿನ‌ ಹನುಗನಹಳ್ಳಿಯಲ್ಲಿ ನಡೆದಿದೆ.

ಆರೋಗ್ಯ ಇಲಾಖೆ ಹಾಗು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದರು. ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ ಓ ಮೋಹನ್, ಮೈಸೂರು ಡಿಎಚ್ ಓ ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಐಷಾರಾಮಿ ಮನೆಯಲ್ಲಿ ಕಿಡಿಗೇಡಿಗಳು  ಕೃತ್ಯ ಎಸಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು. ಗ್ರಾಮೀಣ ಭಾಗದ ಮಹಿಳೆಯರನ್ನ ಟಾರ್ಗೆಟ್ ಮಾಡಿತಂಡದಿಂದ ಕೃತ್ಯ ನಡೆದಿದೆ.

ಕೃತ್ಯಕ್ಕೆ ಬಳಸಿದ್ದ ಪರಿಕರಗಳ ಸಮೇತ ವಶಕ್ಕೆ ಪಡೆಯಲಾಗಿದೆ. ಲಕ್ಷ ಲಕ್ಷ ಹಣ ಪಡೆದು  ತಂಡ ಸ್ಕ್ಯಾನಿಂಗ್ ಮಾಡುತ್ತಿತ್ತು. ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ಸ್ಕ್ಯಾನಿಂಗ್ ಮೂಲಕ ತಿಳಿದುಕೊಂಡು ನಂತರ ಹೆಣ್ಣು ಮಗುವಾದರೆ ಗರ್ಭಪಾತ ಮಾಡುವ ಕೃತ್ಯ ನಡೆಯುತ್ತಿತ್ತು.