ಮೈಸೂರು : ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪಿನಿಂದ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದ್ದು, ಆರು ಜನ ಮುಸ್ಲಿಂ ಯುವಕರ ಮೇಲೆ ಮುಸ್ಲಿಂ ಯುವಕರಿಂದಲೇ ಹಲ್ಲೆ ನಡೆಸಿರುವ ಘಟನೆ ನಂಜನಗೂಡಿನ ನೀಲಕಂಠ ನಗರದಲ್ಲಿ ನಡೆದಿದೆ.

ನೀಲಕಂಠ ನಗರದ ಇಲ್ಲೂ, ಜಾಫರ್, ಸಲ್ಮಾನ್ ಎಂಬುವವರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಕಾರ್ ನಿಲ್ಲಿಸುವ ವಿಚಾರ, ರಸ್ತೆಯಲ್ಲಿ ಓಡಾಟದ ವಿಚಾರಕ್ಕೆ ಕಿರಿಕ್ ನಡೆದಿದೆ. ಸಲ್ಮಾನ್ ಎಂಬುವರು ಸೇರಿದಂತೆ ಆರು ಜನಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಮಾಡಿರುವ ಮುಸ್ಲಿಂ ಯುವಕರು ಮಾದಕ ವಸ್ತು ಸೇವನೆ ಮಾಡಿದ್ರು ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪ ಮಾಡಿದ್ದಾರೆ. ಆರು ಜನ ಹಲ್ಲೆಗೊಳಗಾಗಿದ್ದು, ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.