ತಿ.ನರಸೀಪುರ: ಸುಮಾರು 45 ವರ್ಷಗಳ ಹಿಂದೆ ನಿರ್ಮಾಣವಾದ ನೀರಾವರಿ ಕಾಲುವೆಯನ್ನು ಮುಚ್ಚಿ  ದಬ್ಬಾಳಿಕೆ ಮಾಡಿತ್ತಿದ್ದರು ಕಂಡು ಕಾಣದಂತೆ ಇದ್ದು ಕಾಲುವೆ ಮುಚ್ಚುತ್ತಿದ್ದವರ ವಿರುದ್ಧ ಕ್ರಮ ವಹಿಸಿದೆ. ಸರಿಪಡಿಸುತ್ತೇನೆ ಎಂದು  ಸಮರ್ಥನೆ ನೀಡುತ್ತಿರುವ ಕಬಿನಿ ನೀರಾವರಿ ಇಲಾಖೆ ಇಂಜಿನಿಯರ್ ನಡೆಯನ್ನು ರೈತರು ತೀವ್ರವಾಗಿ ಖಂಡಿಸಿದರು.

ಸರ್ಕಾರಿ ಕಾಮಗಾರಿ ತಡೆದು ತೆರೆದಿದ್ದ ಕಾಲುವೆಯನ್ನು ಮುಚ್ಚಿದ್ದರು ಇವರುಗಳ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ನೀರಾವರಿ ಇಲಾಖೆಯವರು ಸಾಮಿಲಾಗಿದ್ದಾರೆ ಆಗಿದ್ದಾರೆ ಎಂದು ಅನುಮಾನ ಮೂಡುತ್ತಿದೆ ರೈತರು ಆರೋಪ ಮಾಡಿದರು.

ಆಲಗೂಡು ಗ್ರಾಮದ ಎಲ್ಲೆಗೆ ಸೇರಿರುವ 36 ನೇ ನಾಲೆ 5 ನೇ ಮೈನರ್ ನಲ್ಲಿ ಸುಮಾರು 100 ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ 45 ವರ್ಷ ಗಳ ಹಿಂದಿನಿಂದಲ್ಲೂ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ ಆದರೆ ಇತ್ತೀಚಿಗೆ ಪ್ರಭಾವಿ ವ್ಯಕ್ತಿಗಳು ಕಾಲುವೆ ಜಾಗ ನಮಗೆ ಸೇರಿದೆ ಎಂದು ಕಾಲುವೆಯನ್ನು‌ ಮುಚ್ಚುತ್ತಿದ್ದಾರೆ ಈ ಬಗ್ಗೆ ಪ್ರಶ್ನೆ ಮಾಡಿದ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಇಷ್ಟಾದರೂ ಸಹ ಕಬಿನಿ ನೀರಾವರಿ ಇಲಾಖೆ ಇಂಜಿನಿಯರ್ ಕ್ರಮ ವಹಿಸದೆ ಇರುವುದು ನೋಡಿದರೆ ಅವರ ಮೇಲೆ ನಮಗೆ ಅನುಮಾನ ಬರುತ್ತಿದೆ ಎಂದು ರೈತರು ಆಪಾದಿಸಿದರು.

ಈ ವೇಳೆ ಮಾತನಾಡಿದ ರೈತ ರಮೇಶ್ ಈ ನಾಲೆಯ ನೀರನ್ನು ಅವಲಂಬಿಸಿ ನೂರಾರು ರೈತರು ವ್ಯವಸಾಯ ಮಾಡುತ್ತಿದ್ದಾರೆ ನಮಗೆ ತಿಳಿದ ಮಟ್ಟಿಗೆ ಕಾಲುವೆ ನಿರ್ಮಾಣ ಆಗಿ ಸುಮಾರು 45 ರಿಂದ 50 ವರ್ಷ ಆಗಿದೆ ಈ ಕಾಲುವೆ ನೀರನ್ನೆ ಬಳಸಿ ತನ್ನದೇ ಜಮೀನು ಎಂದು ಹೇಳುತ್ತಿರುವ ಪ್ರಭಾವಿ ವ್ಯಕ್ತಿಗಳು ಸಹ ವ್ಯವಸಾಯ ಮಾಡುತ್ತಿದ್ದಾರೆ ಆದರೂ ಸಹ ಈ ಕಾಲುವೆ ಜಾಗ ನಮಗೆ ಸೇರಿದೆ ಎಂದು ಮುಚ್ಚುವ ಪ್ರಯತ್ನ ಮಾಡುತ್ತಾರೆ ರೈತರು ತಡೆದಾಗ ಸ್ವಲ್ಪ ದಿನ ತಟಸ್ಥವಾಗಿದ್ದು ಮತ್ತೆ ಅದೇ ಚಾಳಿ ಮುಂದುವರೆಸುತ್ತಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದೆ ಇರುವುದರಿಂದ ರೈತರ ನಡುವೆ ಘರ್ಷಣೆ ಉಂಟಾಗುವ ಇತಿ ನಿರ್ಮಾಣ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ವಿಚಾರವಾಗಿ ಪೊಲೀಸ್ ಠಾಣೆಯನ್ನು ದೂರು ದಾಖಲೆ ಮಾಡಿದ್ದೇವೆ.

ಮುಂದುವರಿದು ಮಾತನಾಡಿದ ರಮೇಶ್ 45 ವರ್ಷದಿಂದ ಯಾವ ತಂಟೆ ತಕರಾರು ಮಾಡದೆ ಸುಮ್ಮನಿದ್ದ ಅಪ್ಪ ಮತ್ತು ಮಗ ಭೂಮಿ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ದೀಢಿರ್ ಅಂತ ಕಾಲುವೆ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ ಇವರ ಬಗ್ಗೆ ರೈತರೆಲ್ಲರು ಸೇರಿ ಮೂರು ಬಾರಿ ಕಬಿನಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಅಲ್ಲದೆ ನಿನ್ನೆ ಸಹ ಪೋಲಿಸ್ ಠಾಣೆಗೂ ದೂರು ನೀಡಿದ್ದೇವೆ ಈ ಬಗ್ಗೆ ತಹಶೀಲ್ದಾರ್ ರವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ರೈತರಾದ ಶಶಿಕುಮಾರ್, ಮಾದೇಶ್, ಪುಟ್ಟರಾಜ ಅರಸ್, ಹರೀಶ್, ಮುದ್ದಣ್ಣ, ಪಾಪಣ್ಣ, ಮರಿಸಿದ್ದ, ಸತೀಶ್ ಸೇರಿದಂತೆ ಮತ್ತಿತರರು ಇದ್ದರು