ಮೈಸೂರು : ಸಾಲಾ ಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ತಾಲೂಕಿನ ಧನಗಹಳ್ಳಿಯಲ್ಲಿ ನಡೆದಿದೆ. ಶುಂಠಿ ಬೆಳೆ ಬೆಳೆದು ಜೀವವನ್ನೇ ರೈತ ಕಳೆದುಕೊಂಡಿದ್ದಾನೆ. ವಿಷದ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಣಿಕಂಠ (40) ಮೃತ ದುರ್ದೈವಿ ರೈತ. ಬೆಳೆದ ಬೆಳೆ ಕೈಕೊಟ್ಟು ರೈತ ಕಂಗಾಗಿದ್ದಾನೆ.

ಬ್ಯಾಂಕುಗಳು ಸೇರಿ ಕೈ ಸಾಲ ಸುಮಾರು ಎಂಟು ಲಕ್ಷ ಮಾಡಿಕೊಂಡಿದ್ದ ರೈತ ಮಣಿಕಂಠ. ಸಾಲಗಾರರ ಬಾದೆ ತಾಳಲಾರದೆ  ರೈತ ಮನನೊಂದಿದ್ದಾನೆ. ಉತ್ತಮ ಬೆಳೆ, ಉತ್ತಮ ಬೆಲೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ ಕೈ ಕೊಟ್ಟ ಬೆಳೆ, ಬೆಲೆ.

ಕೈ ಸಾಲ ಬ್ಯಾಂಕ್ ಸಾಲಗಳನ್ನು ತೀರಿಸಲಾಗಿದೆ ವಿಷದ ಮಾತ್ರೆ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದುವರೆ ಎಕರೆ ಜಮೀನಿನಲ್ಲಿ ರೈತ ಶುಂಠಿ ಬೆಳೆ ಬೆಳೆದಿದ್ದನು. ಜಮೀನಿನಲ್ಲೆ ವಿಷದ ಮಾತ್ರೆ ಸೇವಿಸಿ ಮಣಿಕಂಠ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಪ್ರಕರಣ ಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.