ಮೈಸೂರು: ಹುಲಿದಾಳಿಗೆ ಸರಗೂರು ತಾಲೂಊಕಿನ ಮುಳ್ಳೂರು ಗ್ರಾಮದಲ್ಲಿ ರೈತ ಬಲಿಯಾದ ಪ್ರಕರಣದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದುಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಗ್ರಾಸ್ಥರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿಯನ್ನ ಆಕ್ರೋಷವಾಗಿ ವಿವರಿಸಿದ್ದಾರೆ.ನರಹಂತಕ ವ್ಯಾಘ್ರನ ಸೆರೆ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆಂದು ಆರೋಪಿಸಿದ್ದಾರೆ. ಘಟನೆ ನಡೆದು ಗಂಟೆಗಳು ಉರುಳಿದರೂ ಯಾವೊಬ್ಬ ಅಧಿಕಾರಿ ಇತ್ತ ಸುಳಿದಿಲ್ಲ ವೆಂದು ಗ್ರಾಮಸ್ಥರ ಆರೋಪ.

ಕಾಡಿನಿಂದ ಮುಳ್ಳೂರು ಗ್ರಾಮ ದೂರವಿದ್ದರೂ ಹುಲಿ ದಾಳಿ ನಡೆಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದು ಜೊತೆ ಮಾತನಾಡಲು ಬಂದ ಗ್ರಾಮಸ್ಥರನ್ನ ಪೊಲೀಸರು ನಿಯಂತ್ರಿಸುವ ವೇಳೆ ತಳ್ಳಾಟ ನೂಕಾಟ ನಡೆದಿದೆ. ನಿಮ್ಮದೇ ಸರ್ಕಾರವಿದ್ದರೂ ಕಾಡು ಪ್ರಾಣಿಗಳಿಂದ ರಕ್ಷಣೆ ಇಲ್ಲವೆಂದು ಶಾಸಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.