ಮೈಸೂರು: ಹುಟ್ಟು ಹಬ್ಬವೆಂದರೆ ತಮ್ಮ ಘನತೆ ಸ್ಥಾನಮಾನ ತೋರಿಸುವಂತೆ ಆಡಂಬರದಿಂದ ಆಚರಿಸಿಕೊಳ್ಳುವ ಈ ಕಾಲಮಾನದಲ್ಲಿ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವರವರ 52 ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಬೆಂಬಲಿಗರು ಸಮಾಜಮುಖಿಯಾಗಿ ಆಚರಿಸಿ, ಮಾದರಿಯಾಗಿದ್ದಾರೆ.

ಬೇಸಿಗೆ ಬಿರು ಬಿಸಿಲು ಚುರುಕಾಗಿದ್ದು ಪ್ರಾಣಿ ಪಕ್ಷಿಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ. ಇಂದು ಇತಿಹಾಸ ಪ್ರಸಿದ್ದ ವಡ್ಗಲ್ ರಂಗನಾಥಸ್ವಾಮಿ ಬೆಟ್ಟದಲ್ಲಿ ಚನ್ನ‌ಕೇಶವ ರವರ ಬೆಂಬಲಿಗರು ಹಾಗೂ ಸ್ನೇಹಿತರು ಹುಟ್ಟು ಹಬ್ಬದ ಅಂಗವಾಗಿ ಬೆಟ್ಟದಲ್ಲಿನ ನೂರಾರು ಕಾಡು ಮರಗಳಿಗೆ ಪುಟ್ಟ ಪುಟ್ಟ ಬುಟ್ಟಿ ಕಟ್ಟಿ ಅದಕ್ಕೆ ನೀರು ತುಂಬಿಸಿ ಪ್ರಾಣಿಪಕ್ಷಿಗಳಿಗೆ ನೀರುಣಿಸುವ ಅಪರೂಪದ ಕಾರ್ಯಕ್ಕೆ ಮುಂದಾಗಿದ್ದು ಸಮಾಜಕ್ಕೆ ಮಾದರಿ ಎನಿಸಿದ್ದಾರೆ.