ಮೈಸೂರು: ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಆಗಮಿಸಿದ್ದರು.

ಪ್ರಭುದೇವ ಅವರು ಕಳೆದ ವರ್ಷ ತಾವೇ ಜೀರ್ಣೋದ್ಧಾರಗೊಳಿಸಿದ್ದ ತಮ್ಮ ಕುಲ ದೇವರಾದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಚಿಕ್ಕ ವಯಸ್ಸಿನಿಂದ ಆಡಿ ಬೆಳೆದ ದೂರ ಗ್ರಾಮದಲ್ಲಿರುವ ತಮ್ಮ ತೋಟದಲ್ಲಿ ನೆಲದ ಮೇಲೆ ಕುಳಿತು ತಮ್ಮ ಸ್ನೇಹಿತರೊಂದಿಗೆ ಸಾಮಾನ್ಯರಂತೆ ಊಟ ಸವಿದು ಕಾಲ ಕಳೆದರು. ಈ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾದ ಸಿ.ಆರ್.ಮಂಜು, ಉಮೇಶ್ ಉಪಸ್ಥಿತರಿದ್ದರು.