ಮೈಸೂರು: ಅರಮನೆ ಮಂಡಳಿ ವತಿಯಿಂದ ಅರಮನೆ ಅಂಗಳದಲ್ಲಿ ಡಿ.21ರಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರವಾಸಿಗರ ಮತ್ತು ಪ್ರೇಕ್ಷಕರ ಗಮನಸೆಳೆಯಲಿದೆ.

ಡಿಸೆಂಬರ್ 21 ರಂದು ಸಂಜೆ 5 ಗಂಟೆಗೆ ಅರಮನೆಯ ಫಲಪುಷ್ಪ ಪ್ರದರ್ಶನ, ವರಾಹ ಉದ್ಯೋನವನದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಬೊಂಬೆ ಮನೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಸಂಜೆ 5.30ರಿಂದ 6.30ರವರೆಗೆ ಸಿ.ಆರ್.ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿಂದ ವಾದ್ಯಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಗೆ ಎ.ಆರ್.ಕಲಾ ತಂಡದವರಿಂದ ನಾಡಗೀತೆ ಮತ್ತು ಮೈಸೂರು ಸಂಸ್ಥಾನದ ನಾಡಗೀತೆಯಾದ ಕಾಯೌ ಶ್ರೀಗೌರಿ ಕರುಣಾಲಹರಿ ಗೀತೆ ಹಾಡಲಿದ್ದಾರೆ.

ಸಂಜೆ 7:15 ರಿಂದ 7:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಸಂಜೆ 7:30 ರಿಂದ 9:30 ರವರೆಗೆ ಹಿನ್ನಲೆಗಾಯಕ ಮಧುಬಾಲಕೃಷ್ಣನ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಮತ್ತು ಬೊಂಬೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಗಳು ನಡೆಯಲಿದೆ. ಡಿ.21 ರಿಂದ 31 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಫಲಪುಷ್ಪ ಪ್ರದರ್ಶನ ಹಾಗೂ ಸಂಜೆ 7 ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರುತ್ತದೆ.

22ರಂದು ಸಂಜೆ 6 ರಿಂದ 6.45ರವರೆಗೆ ರಘು.ಆರ್ ಮತ್ತು ತಂಡದವರಿಂದ ಗೀತಗಾಯನ, ಸಂಜೆ 6.45ರಿಂದ 7.15ರವರೆಗೆ ಭಾರತೀಯ ವಿದ್ಯಾಭವನದಿಂದ ನೃತ್ಯರೂಪಕ ಹಾಗೂ ಸಂಜೆ 7.30 ರಿಂದ 9.30ರವರೆಗೆ ಹಿನ್ನಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.

23 ರಂದು ಸಂಜೆ 6 ರಿಂದ 6.45 ರವರೆಗೆ ಆಯುಷ್ ಎಂ.ಡಿ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 7 ರಿಂದ 8.30ರವರೆಗೆ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿAದ ಲಯ- ಲಾವಣ್ಯ ಕಾರ್ಯಕ್ರಮ ನಡೆಯಲಿದೆ.

24ರಂದು ಸಂಜೆ 6 ರಿಂದ 6.45ರವರೆಗೆ ಶಡಜ್ ಗೊಡ್ಖಂಡಿ(ಕೊಳಲು) ಮತ್ತು ಅಪೂರ್ವ ಕೃಷ್ಣ (ಪಿಟೀಲು ವಾದನ) ಹಾಗೂ ತಂಡದವರಿಂದ ಫೂಶನ್ ಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಯಿAದ 8 ಗಂಟೆಯವರೆಗೆ ಸಿದ್ದಾರ್ಥ ಬೆಲ್ಮಣ್ಣ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಂಜಿಫ ರಘುಪತಿ ಭಟ್ ವರ್ಣಚಿತ್ರ ಕಲಾವಿದರಿಂದ ದಾಸವಾಣಿ ಚಿತ್ರಣ ಕಾರ್ಯಕ್ರಮ ಹಾಗೂ ಸಂಜೆ 8 ರಿಂದ 9.30 ರವರೆಗೆ ಚಂಪಕ ಅಕಾಡೆಮಿ ವೃಂದ ಡಾ.ನಾಗಲಕ್ಷ್ಮಿ ನಾಗರಾಜನ್ ಹಾಗೂ 40 ಜನ ತಂಡದವರಿಂದ ಶ್ರೀ ಕೃಷ್ಣ ಲೀಲಾ ವಿಭೂತಿ ಪದ್ಮಭೂಷಣ ಡಿವಿಜಿ ವಿರಜಿತ ಗೇಯ ನೃತ್ಯ ನಾಟಕ ಕಾರ್ಯಕ್ರಮ ನಡೆಯಲಿವೆ.

25 ಸಂಜೆ 5.45ರಿಂದ 6.30ರವರೆಗೆ ನಾಹರ್ ಗುರುದತ್ತ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 6.30 ರಿಂದ 7.30ರವರೆಗೆ ಸಂಗೀತ ವಿದ್ವಾನ್ ಪ್ರೊ.ಡಾ.ಸಿ.ಎ.ಶ್ರೀಧರ, ವಿದ್ವಾನ್ ಸಿ.ಎಸ್.ಕೇಶವಚಂದ್ರ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ ಕಾರ್ಯಕ್ರಮ ಹಾಗೂ ಸಂಜೆ 7.30 ರಿಂದ 9 ಗಂಟೆಯವರೆಗೆ ಜೀ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಗಾಯಕರುಗಳಾದ ದರ್ಶನ್ ನಾರಾಯಣ್, ಐಶ್ವರ್ಯ ರಂಗರಾಜನ್, ಸುನಿಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನಗುರುರಾಜ್ ಮತ್ತು ತಂಡದವರಿAದ ಸಂಗೀತಯಾನ ಕಾರ್ಯಕ್ರಮಗಳು ನಡೆಯಲಿದೆ.

ಪೊಲೀಸ್ ಇಲಾಖೆಯ ವತಿಯಿಂದ ಡಿ.31 ರಂದು ರಾತ್ರಿ 11 ರಿಂದ 12 ಗಂಟೆಯವರೆಗೆ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಮಧ್ಯರಾತ್ರಿ 12 ರಿಂದ 12.15ರವರೆಗೆ ಮೈಸೂರು ಅರಮನೆ ಮಂಡಳಿಯ ವತಿಯಿಂದ ಹೊಸ ವರ್ಷಾಚರಣೆಯ ಪ್ರಯುಕ್ತ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ.