ಮೈಸೂರು: ನಗರದ ಬನ್ನಿಮಂಟಪ ಬಡಾವಣೆ, ರಾಡಿಕೋ ಡಿಸ್ಟಿಲರಿ ಸುತ್ತಮುತ್ತ, ಎನ್.ಆರ್.ಮೊಹಲ್ಲಾ ಹಾಗೂ ಸಿ.ವಿ ಮೊಹಲ್ಲಾಗಳಲ್ಲಿನ ಗೋಡನ್‌ಗಳು, ಗುಜರಿ ಅಂಗಡಿಗಳು ಹಾಗೂ ಇನ್ನಿತರ ಅನುಮಾನಸ್ಪದ ಸ್ಥಳಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳಾಗಲೀ ಮತ್ತು ಮಾದಕ ವಸ್ತುಗಳಾಗಲೀ ಕಂಡುಬಂದಿಲ್ಲ. ಅಬಕಾರಿ ಉಪ ಅಧೀಕ್ಷಕಾರದ ಹೆಚ್.ಕೆ.ರಮೇಶ್ ರವರ ನೇತೃತ್ವದಲ್ಲಿ ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ರವರ ನಿರ್ದೇಶನದ ಮೇರೆಗೆ ಇಂದು ಮೈಸೂರು ನಗರ ಜಿಲ್ಲೆಯ ಅನುಮಾನಸ್ಪದ ಸ್ಥಳಗಳಲ್ಲಿ ಅಬಕಾರಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಯಾವುದೇ ಮಾದಕ ವಸ್ತುಗಳಾಗಲಿ ಅನುಮಾನಾಸ್ಪದ ವಸ್ತುಗಳಾಗಲಿ ದೊರೆತಿಲ್ಲವೆಂದು ಖಚಿತಪಡಿಸಿದ್ದಾರೆ.