ಮೈಸೂರು: ಸಿನಿಮೀಯ ರೀತಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಮೈಸೂರಿನ ಹೆಬ್ಬಾಳ ಲೋಕನಾಯಕನಗರ ವಿಜಯನಗರ ವ್ಯಾಪ್ತಿಯಲ್ಲಿ ನಡೆದಿದೆ.
ಸಮಯಕ್ಕೂ ಮುನ್ನವೇ ಬಾರ್ ರೆಸ್ಟೋರೆಂಟ್ಗೆ ಮಾಲೀಕರು ತೆರೆದಿದ್ದರು. 6 ಗಂಟೆಗೆ ಮದ್ಯದಂಗಡಿಗಳು ಓಪನ್ ಆಗಿದೆ. ಅಧಿಕಾರಿಗಳ ದಾಳಿ ಕಂಡು ಬಾರ್ ಮಾಲೀಕರು ಕಕ್ಕಾಬಿಕ್ಕಿಯಾದರು. ಅವಧಿಗೂ ಮುನ್ನ ಅಂಗಡಿ ತೆರೆದಿದಕ್ಕೆ ತರಾಟೆಗೆ ತೆಗೆದುಕೊಂಡರು. ಮಾಲೀಕರಿಂದ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ಅಂಗಡಿ ಮುಚ್ಚಿಸಿದರು.

