ಮೈಸೂರು : ವಿದ್ಯುತ್ ಅವಘಡದಿಂದ ತಾಯಿ, ಮಗ ಸಾವನ್ನಪ್ಪಿದ ಘಟನೆ ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಯಿ ನೀಲಮ್ಮ (42) ಮಗ ಹರೀಶ್ (24) ಮೃತ ದುರ್ದೈವಿಗಳು. ತಮ್ಮ ಜಮೀನಿನಲ್ಲಿ ಹರೀಶ್ ಜೋಳ ಬೆಳೆದಿದ್ದರು. ತಮ್ಮ ಜಮೀನಿನ ಬೇಲಿಯ ಬಳಿ ಲೈನ್ ಕೆಳ ಭಾಗಕ್ಕೆ ಜೊತು ಬಿದ್ದಿದೆ. ಜಮೀನಿಗೆ ತೆರಳಿತ್ತಿದ್ದ ವೇಳೆ ಹರೀಶ್‌ಗೆ ವಿದ್ಯುತ್ ಸ್ಪರ್ಶಿಸಿದೆ.

ಈ ವೇಳೆ ರಕ್ಷಣೆಗೆ ಹೋದ ತಾಯಿ ಇಬ್ಬರಿಗೂ ವಿದ್ಯುತ್ ಸ್ಪರ್ಶವಾಗಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಆರೋಪ ಮಾಡಲಾಗಿದೆ. ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಲಾಗಿದೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.