ಮೈಸೂರು : ಚುನಾವಣಾ ಆಯೋಗದ ಕಮಿಷನರ್ ರಾಜಕೀಯ ಪುಡಾರಿ ತರ ಮಾತನಾಡುತ್ತಾರೆ ಎಂದು ವರುಣ ವ್ಯಾಪ್ತಿಯ ಬಿಳಿಗೆರೆ ಗ್ರಾಮದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬಿಜೆಪಿ ವೋಟ್ ಚೋರಿ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಕಳೆದ ಬಾರಿಗೆ 400 ಸ್ಥಾನವನ್ನು ಗೆಲ್ಲುತ್ತೇವೆ ಅಂತ ಇದ್ದರು. ಅದು ಗೆದ್ದಿದ್ದು ಮಾತ್ರ 240 ಕ್ಷೇತ್ರ, ವೋಟ್ ಚೋರಿ ಆಗಿರ್ಲಿಲ್ಲ ಅಂದಿದ್ರೆ ನಮ್ಮ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರ್ತಿತ್ತು.
ಹಿಂದೆ ಚುನಾವಣೆ ಆಯೋಗ ತನ್ನ ಕೆಲಸ ನಿಷ್ಠೆಯಿಂದ ಮಾಡ್ತಾ ಇತ್ತು. ಆದರೆ ಈಗ ರಾಜಕೀಯ ಪುಡಾರಿ ತರ ವರ್ತನೆ ಮಾಡುತ್ತಿದೆ. ಚುನಾವಣೆ ಆಯೋಗಕ್ಕೆ ರಾಹುಲ್ ಗಾಂಧಿ ದೂರು ದಾಖಲೆ ಕೊಟ್ರು ಕೂಡ ಪರಿಶೀಲನೆ ಮಾಡ್ತಾ ಇಲ್ಲ, ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.

