ಮೈಸೂರು: ದಸರಾ ಆನೆ ಅಭಿಮನ್ಯು ದಂತ ಕಳೆದುಕೊಂಡಿದೆ. ಮತ್ತಿಗೋಡು ಆನೆ ಶಿಬಿರದಲ್ಲಿ ಘಟನೆ ನಡೆದಿದೆ.ಮರದ ದಿಮ್ಮಿಗಳನ್ನು ಸಾಗಿಸುವ ವೇಳೆ ಅಭಿಮನ್ಯುವಿನ ಎಡ ಭಾಗದ ದಂತದ ತುದಿ ಮುರಿದಿದೆ.
ಆನೆ ಶಿಬಿರಗಳಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ನಿಯಮಿತ ಕೆಲಸ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಲವಾದ ವಸ್ತುವಿಗೆ ತಗುಲಿ ದಂತ ಮುರಿದಿದೆ.
ಅಭಿಮನ್ಯು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ.ದಸರೆಯಲ್ಲಿ ಅಂಬಾರಿ ಹೊರಲು ತೊಂದರೆ ಇಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಪಶು ವೈದ್ಯರು ಪರಿಶೀಲಿಸಿ, ದಂತ ಮುರಿತದಿಂದ ಅಭಿಮನ್ಯುಗೆ ಗಾಯವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

