ನಂಜನಗೂಡು: ಬಸ್ ನಿಂದ ಇಳಿಯುತ್ತಿದ್ದ ವೇಳೆ ಮುಂದೆ ಸಾಗಿದ ಪರಿಣಾಮ ಪ್ರಯಾಣಿಕನ ಕಾಲು ಕಟ್ ಆದ ಪ್ರಕರಣ ಹುಲ್ಲಹಳ್ಳಿಯ ದುಗ್ಗಹಳ್ಳಿ ಬಳಿ ನಡೆದಿದೆ. ಪ್ರಯಾಣಿಕನ ಕಾಲು ನಜ್ಜುಗುಜ್ಜಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಗ್ಗಹಳ್ಳಿ ಗ್ರಾಮದ ಶೆಟ್ಟಯ್ಯ (58) ಗಾಯಗೊಂಡ ಪ್ರಯಾಣಿಕ. ಹೆಡಿಯಾಲ ಗ್ರಾಮದಿಂದ ಹುರ ಮಾರ್ಗವಾಗಿ ಹುಲ್ಲಹಳ್ಳಿಗೆ ಸಾರಿಗೆ ಬಸ್ ತೆರಳುತ್ತಿತ್ತು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶೆಟ್ಟಯ್ಯ ಗೇಟ್ ಬಳಿ ಇಳಿಯುತ್ತಿದ್ದಾಗ ಚಾಲಕ ಗಮನಿಸದೆ ಮುಂದೆ ಸಾಗಿದ್ದಾನೆ.
ಬಸ್ ನಿಂದ ಆಯತಪ್ಪಿ ಬಿದ್ದ ಶೆಟ್ಟಯ್ಯನ ಮೇಲೆ ಬಸ್ ಚಕ್ರ ಹರಿದಿದೆ. ಶೆಟ್ಟಯ್ಯನ ಎರಡು ಕಾಲುಗಳು ಸಂಪೂರ್ಣವಾಗಿ ನಜ್ಜು ಗುಜ್ಜಾಗಿವೆ. ಘಟನಾ ಸ್ಥಳಕ್ಕೆ ಹುಲ್ಲಹಳ್ಳಿ ಪಿಎಸ್ಐ ಚೇತನ್ ಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಶೆಟ್ಟಯ್ಯನನ್ನ ನಂಜನಗೂಡಿನ ಸರ್ಕಾರಿ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ.

