ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ವಿರುದ್ದ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 9.30 ಗಂಟೆಯಾದರೂ ಅರಮನೆಗೆ ಬಾರದ ಜಿಲ್ಲಾ ಸಚಿವ ಯತೀಂದ್ರ ಸಿದ್ದರಾಮಯ್ಯ
8.45 ಗಂಟೆಗೆ ಮಾವುತ ಕಾವಡಿಗಳ ಕುಟುಂಬದ ಜೊತೆ ಜಿಲ್ಲಾಡಳಿತ ಉಪಹಾರ ಕೂಟ ಏರ್ಪಡಿಸಿದ್ದರು.

ಯತೀಂದ್ರ ಸಿದ್ದರಾಮಯ್ಯ ಜೊತೆಗೆ ಉಪಹಾರ ಕೂಟ ಹಾಗೂ ಕಿಟ್ ವಿತರಣೆ ಕಾರ್ಯಕ್ರಮ ನಡೆಯಲಿತ್ತು. ಯತೀಂದ್ರ ಗಾಗಿ ಮಾವುತ ಕಾವಡಿಗಳ ಕುಟುಂಬಸ್ಥರು ಕಾದು ಕುಳಿತರು. ಯತೀಂದ್ರ ಸಿದ್ದರಾಮಯ್ಯ ಬಾರದ ಹಿನ್ನಲೆ ಶಾಸಕ ತನ್ವೀರ್ ಸೇಠ್ ಗರಂ ಆದರು.

ಕಾದು ಕಾದು ತನ್ವೀರ್ ಸೇಠ್ ವಾಪಸ್ ತೆರಳಿದರು. ಬೇರೆ ಕಾರ್ಯಕ್ರಮ ಆದ್ರೆ ಓಕೆ ಮಾವುತ ಕವಡಿಗಳನ್ನು ತಿಂಡಿಗೆ ಕಾಯಿಸೋದ.? ಫೋನ್ ಕಾಲ್ ನಲ್ಲಿ ಮಾತನಾಡಿ ಶಾಸಕ ತನ್ವೀರ್ ಸೇಠ್ ತೆರಳಿದರು.