ನಂಜನಗೂಡು: ಬಿಳಿಗೆರೆ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದ ವತಿಯಿಂದ 2025ರ- 26ನೇ ಸಾಲಿನ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಹಳ್ಳಿ ಶಿವಕುಮಾರ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದ್ವಿದಳ ಧಾನ್ಯಗಳ ಕೊರತೆ ಇದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ನಮ್ಮ ರೈತ ಬಂಧುಗಳು ತಮ್ಮ ಜಮೀನುಗಳಲ್ಲಿ ಹೆಚ್ಚು ಹೆಚ್ಚು ದ್ವಿದಳ ಧಾನ್ಯಗಳನ್ನು ಬೆಳೆದರೆ ರೈತರ ಆರ್ಥಿಕ ಮಟ್ಟ ಅಲ್ಲದೆ ನಮ್ಮ ದೇಶದ ಆರ್ಥಿಕ ಮಟ್ಟವನ್ನು ಚಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
ಅಲ್ಲದೆ, ವಿದಳ ಧಾನ್ಯಗಳನ್ನು ಬೆಳೆದರೆ ಮಣ್ಣು ಫಲವತ್ತತೆಯಿಂದ ಕೂಡಿರುತ್ತದೆ. ಮುಂದಿನ ಬೆಳೆಗಳಿಗೆ ಯಾವ ರೋಗ ಕೀಟ ಬಾರದೆ ಉತ್ತಮ ಬೆಳೆಗಳನ್ನು ಬೆಳೆಯಬಹುದು ಎಂದರು. ಈ ಸಂದರ್ಭದಲ್ಲಿ ಬಿಳಿಗೆರೆ ಕೃಷಿ ಅಧಿಕಾರಿ ರಘುವೀರ, ರೈತ ಸಂಪರ್ಕ ಕೇಂದ್ರದ ವ್ಯವಸ್ಥಾಪಕಿ ಶೃತಿ, ಲೆಕ್ಕ ಸಹಾಯಕ ಎಚ್ಎನ್ ನಟರಾಜ್ ಸೇರಿದಂತೆ ರೈತರು ಹಾಜರಿದ್ದರು.

