ಮೈಸೂರು : ದಸರಾ ಗಜಪಡೆ ಮಾವುತರು, ಕಾವಾಡಿಗಳ ಮಡದಿಯರಿಗೆ ಎಂಎಲ್ಸಿ ಡಾ. ಯತೀಂದ್ರ  ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಮಾವುತರ ಮಡದಿಯರಿಗೆ ಬಾಗಿನ ವಿತರಣೆ ಮಾಡಲಾಯಿತು.

ಮೈಸೂರು ದಸರಾಗೆ  ಕಾಡಿನಿಂದ ಮಾವುತರ ಜೊತೆ ಆಗಮಿಸಿರುವ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಡಾ. ಯತೀಂದ್ರ  ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಬಾಗಿನ ವಿತರಣೆ ಮಾಡಿ, ಮಾವುತರ ಮಡದಿಯರಿಗೆ  ಅರಿಶಿಣ ಕುಂಕುಮ ಬಳೆ  ಸೀರೆ ನೀಡುವ ಮೂಲಕ ಬಾಗಿನ  ನೀಡಲಾಯಿತು.