ನಂಜನಗೂಡು: ಸುಮಾರು 13 ವರ್ಷಗಳ ಹಿಂದೆ ನಡೆದಂತಹ ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಸರ್ಕಾರ ಮರು ತನಿಖೆಗೆ ಆದೇಶಿಸಬೇಕು ಎಂದು ಕರ್ನಾಟಕ ಭೀಮ್ ಸೇನೆಯ ತಾಲ್ಲೂಕು ಅಧ್ಯಕ್ಷ ಬಾಣೂರು ಶಿವಸ್ವಾಮಿ ಆಗ್ರಹಿಸಿದರು.
ನಂಜನಗೂಡು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಕೂಡಲೇ ಸರ್ಕಾರ ಒಳಪಡಿಸಬೇಕು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ರವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, ಘನನ್ಯಾಯಾಲಯವು ಸಂತೋಷ್ ರಾವ್ ರವರನ್ನು ಆರೋಪ ಮುಕ್ತರಾಗಿ ಮಾಡಿದ್ದಾರೆ. ಆದರೆ, ಸೌಜನ್ಯ ಪ್ರಕರಣಕ್ಕೆ ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆಯಾಗಿದೆ.
ಈ ಪ್ರಕರಣವನ್ನು ಮತ್ತೆ ತನಿಖೆ ಮಾಡಿದರೆ ನಿಜವಾದ ಆರೋಪಿಗಳು ಸಿಗಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ನೀಡಬೇಕು. ಇಲ್ಲದಿದ್ದರೆ ಕರ್ನಾಟಕ ಭೀಮ್ ಸೇನೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಂಬಯ್ಯ ಹೊಸೂರು, ಪ್ರಕಾಶ್ ಮುಳ್ಳೂರು, ದಿವಾಕರ್ ದೇವನೂರು, ಸುನೀಲ್ ಕುಮಾರ್ ಹಾಜರಿದ್ದರು.

