ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಯೋಜಿಸಿದ ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಜೆಪಿ ನಗರದ ನಿವಾಸಿ ರಶ್ಮಿ, ಲಕ್ಷ್ಮಿಪುರಂ ನಿವಾಸಿ ಉಷಾ, ಬೆಂಗಳೂರು ನಿವಾಸಿ ಮಂಜುಳಾ, ಹಾಸನ ನಿವಾಸಿ ಗುರು, ಬೆಂಗಳೂರು ನಿವಾಸಿ ರಮ್ಯ, ಶ್ರೀರಾಂಪುರ ನಿವಾಸಿ ಪೂಜಾ ಪುನೀತ್, ಚಾಮುಂಡಿಪುರಂ ನಿವಾಸಿ ಶಾರದಾ, ರಾಮಕೃಷ್ಣ ನಗರ ನಿವಾಸಿ ಜಗಲಕ್ಷ್ಮಿ, ಅಗ್ರಹಾರ ನಿವಾಸಿ ಕಾರ್ತಿಕ್, ರಾಮಕೃಷ್ಣ ನಗರ ನಿವಾಸಿ ಸ್ವರೂಪಿಣಿ ರವರು ವಿಜೇತರಾಗಿದ್ದು ಬಹುಮಾನವನ್ನು ವಿತರಿಸಲಾಯಿತು.
ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ಉದ್ಯಮಿಗಳಾದ ಜಯರಾಮ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸಮಾಜ ಸೇವಕರಾದ ಮಂಜುಳಾ ಸೋಮಣ್ಣ, ಕೋಮಲ ಮಣಿ,ಶ್ರುತಿ, ಸಹನಾ, ತಾರಾ ಹಾಗೂ ಇನ್ನಿತರರು ಹಾಜರಿದ್ದರು.

