ನಂಜನಗೂಡು: ರಾಜ್ಯದಲ್ಲಿರುವ ದಲಿತರಿಗೆ ಸಾಗುವಳಿ ಭೂಮಿ ಮಂಜೂರು ಮತ್ತು ಸ್ಮಶಾನವನ್ನು ನೀಡುವಂತೆ ಕಂದಾಯ ಇಲಾಖೆಯ ಸಚಿವರಾದ ಕೃಷ್ಣೆಬೈರೇಗೌಡ ಅವರಿಗೆ ದಲಿತ ಸಂಘರ್ಷ ಸಮಿತಿ ಸಂಯೋಜಕದಿಂದ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಸಂಯೋಜಕದ ಸಂಸ್ಥಾಪಕ ವಿ.ನಾಗರಾಜ್ ನೇತೃತ್ವದ ತಂಡದ ವತಿಯಿಂದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ದಲಿತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ, ದಸಂಸ ಸಂಸ್ಥಾಪಕ ಸಂಯೋಜಕ ವಿ. ನಾಗರಾಜ್ ಮಾತನಾಡಿ, ರಾಜ್ಯಾದ್ಯಂತ ದಲಿತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.

ಅರ್ಜಿಗಳು ಮಾತ್ರ ನಾಮಕಾವಸ್ಥೆಗೆ ಸೀಮಿತವಾಗಿವೆ. ರಾಜ್ಯದಲ್ಲಿ ದಲಿತರ ಸಾಗುವಳಿ ಭೂಮಿ ಮಂಜೂರಾತಿ ನೀಡಿಲ್ಲ. ಸ್ಮಶಾನ ಇಲ್ಲದೆ ದಲಿತರ ಶವ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 94ಸಿ ಚಕ್ರ ಇನಾಂ ಭೂಮಿ ಜಮೀನಿನ ಸಮಸ್ಯೆಗಳನ್ನು ಪರಿಹರಿಸಬೇಕು. ಫಾರಂ ನಂಬರ್ 53,57 ಮತ್ತು 50 ರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸಚಿವರ ಗಮನಕ್ಕೆ ತಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಯೋಜಕ ಹೆಚ್.ಎನ್. ಅಣ್ಣಯ್ಯ, ಕೇಂದ್ರ ಸಮಿತಿ ಸದಸ್ಯರಾದ ಸುಬ್ಬುಹೊಲೆಯರ್, ದೇವಪ್ಪ ದೇವರಮನಿ, ರಾಜ್ಯ ಸಂಘಟನಾ ಸಂಯೋಜಕ ರಮೇಶ್ ರಾಮೇಗೌಡನಹಳ್ಳಿ, ರಾಜ್ಯ ಸಂಯೋಜಕಿ ಗಿರಿಜಾ, ರಾಜ್ಯ ಸಮಿತಿ ಸದಸ್ಯರಾದ ರಾಜಶೇಖರ್, ಮೈಸೂರು ಜಿಲ್ಲೆ ಸಂಯೋಜಕ ಕಾರ್ಯ ಬಸವಣ್ಣ, ದಿವಾಕರ್, ವಿನಯ್, ರಮೇಶ್, ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.