ಮೈಸೂರು: ಮೈಸೂರು ನಗರದ ಒಂಟಿಕೊಪ್ಪಲ್ ನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಧರ್ಮದರ್ಶಿ ಸಮಿತಿ ವತಿಯಿಂದ 83ನೇ ವರ್ಷದ ಶ್ರೀ ಹನುಮ ಜಯಂತಿ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಹನುಮ ಜಯಂತಿ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ.
ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಗೆ ಪುಣ್ಯ ನಾಂದಿ, ಕಳಶ ಸ್ಥಾಪನೆ, ಯಾಗ ಶಾಲೆ ಪ್ರವೇಶ, ಮುಂಜಾನೆ ದೇವರಿಗೆ ಕ್ಷಿರಾಭಿಷೇಕ, ಪಂಚಾಮೃತ ಅಭಿಷೇಕ, ಶ್ರೀ ಗಣಪತಿ ಮತ್ತು ಶ್ರೀ ಲಕ್ಷ್ಮೀನಾರಾಯಣ, ನವಗ್ರಹ ಮೃತ್ಯುಂಜಯ ಹೋಮ, ಸೇರಿದಂತೆ ಮಹಾ ಮಂಗಳಾರತಿ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿಸಲಾಯಿತು.
ಮೈಸೂರು ಮಹಾಲಿಂಗ ಮತ್ತು ತಂಡದವರಿಂದ ಜಾನಪದ ಗೀತೆ ಮತ್ತು ಭಕ್ತಿ ಗೀತೆಗಳನ್ನು ಹಾಡಿ ಭಕ್ತರನ್ನು ರಂಚಿಸಿದರು. ಕಲಾವಿದರಾದ ಮೈಸೂರು ಮಹಾಲಿಂಗ, ದಿವ್ಯಾ, ಪ್ರೀಯಾ, ಚಿನ್ಮಯ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

