ಮೈಸೂರು : ಮುಸುಕುಧಾರಿಗಳಿಂದ ಹಸು ಕಳ್ಳತನವಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಕಾರಿನಲ್ಲಿ ಬಂದು ಹಸುವನ್ನ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಮುಸುಕುಧಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಒಕ್ಕಲಗೇರಿ ನಿವಾಸಿ ಶಿವಕುಮಾರ್ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. 27 ಸಾವಿರ ಮೌಲ್ಯದ ಒಟ್ಟು ಐದು ಹಸುಗಳು ಕಳ್ಳತನವಾಗಿದೆ. ದೇವಸ್ಥಾನಕ್ಕೆ ಬಿಟ್ಟಿದ ಗೂಳಿ ಸೇರಿ 5 ಹಸುಗಳ ಕಳ್ಳತನವಾಗಿದೆ. ನಂಜನಗೂಡು ಜನರು ಬೆಚ್ಚಿ ಬಿದ್ದಿದ್ದಾರೆ.

