ನಂಜನಗೂಡು: ಹುಲ್ಲಹಳ್ಳಿ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ 7 ಮಳಿಗೆಗಳನ್ನು ತೆರವು ಗೊಳಿಸುವಂತೆ  ನ್ಯಾಯಾಲಯದಿಂದ ಆದೇಶ ಬಂದ ಹಿನ್ನಲೆಯಲ್ಲಿ ಅಂಗಡಿ ಮಳಿಗೆಗಳಲ್ಲಿ ಬಾಡಿಗೆ ಇರುವ ಮಾಲೀಕರಿಗೆ ಮಳಿಗೆಗಳನ್ನು ಕೂಡಲೇ  ತೆರವುಗೊಳಿಸುವಂತೆ ಆದೇಶಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಚ್.ಟಿ ನಾಗೇಶ್, ನಿರ್ದೇಶಕರಾದ ಪ್ರಕಾಶ್, ಎನ್ ಬಸವರಾಜು, ಮಹೇಶ್. ತುಕಾರಾಂ, ನಾಗ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂಜುಂಡಸ್ವಾಮಿ, ಚಂದ್ರ ಮೌಳಿ, ಮೋಹನ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.