ಮೈಸೂರು : ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆಯಂಗಳದಲ್ಲಿ ಸ್ತಬ್ಧ ಚಿತ್ರಗಳು ಕಂಗೊಳಿಸುತ್ತಿದೆ. ಜಂಬೂಸವಾರಿಯಲ್ಲಿ ಟ್ಯಾಬ್ಲೋಗಳು ಜನಗಳ ಮನಸೂರೆಗೊಳ್ಳಲಿದೆ. 31 ಜಿಲ್ಲೆಯ ಕಲಾವಿದರಿಂದ ಸ್ತಬ್ಧ ಚಿತ್ರಗಳು ತಯಾರಾಗಲಿದೆ. 25 ಇಲಾಖೆ ಹಾಗೂ ನಿಗಮಗಳಿಂದ ಹಲವು ಟ್ಯಾಬ್ಲೋಗಳು ಇರಲಿದೆ.
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಸುಮಾರು 58 ಸ್ತಬ್ಧ ಚಿತ್ರಗಳಿವೆ. ವಿಜಯದಶಮಿ, ಮಹಾತ್ಮ ಗಾಂಧೀ ಜಯಂತಿ ಹಿನ್ನೆಲೆ ಗಾಂಧೀಜಿ ಜೀವನ, ವಿಚಾರಧಾರೆ ಸಾರುವ ನಿಟ್ಟಿನಲ್ಲಿ ಅನೇಕ ಟ್ಯಾಬ್ಲೋಗಳು ರೂಪುಗೊಳ್ಳುತ್ತಿದೆ.
ಹಸಿವು ಮುಕ್ತ ಕರ್ನಾಟಕದ ಇಂದಿರಾ ಕ್ಯಾಂಟೀನ್ ಮುಡಾ ಅಭಿವೃದ್ದಿ ಟ್ಯಾಬ್ಲೋ ಇರಲಿದೆ. ಜಗಜ್ಯೋತಿ ಬಸವೇಶ್ವರ, ಸಾಂಸ್ಕೃತಿಕ ವೈಖರಿ, ಧಾರ್ಮಿಕ ದೇವಾಲಯಗಳು, ಕಾಶ್ಮೀರದ ಚನ್ನಬ್ ಬ್ರಿಡ್ಜ್ ಹೀಗೆ ಹಲವು ಬಗೆಯ ಸ್ತಬ್ಧ ಚಿತ್ರಗಳು ಜಂಬೂಸವಾರಿಯಲ್ಲಿ ಭಾಗಿಯಾಗಲಿದೆ.
ಮಧ್ಯಾಹ್ನ ನಂಧಿಪೂಜೆ ಬಳಿಕ ರಾಜ ಮಾರ್ಗದಲ್ಲಿ ಸ್ತಬ್ದ ಚಿತ್ರಗಳು ಸಾಗಲಿದೆ. ಆಯಾ ಜಿಲ್ಲೆಯ ಆಕರ್ಷಕ ಸ್ಥಳಗಳ ಮಾದರಿ, ವಿಶೇಷತೆ ಬಿಂಬಿಸುವ ಸ್ತಬ್ಧ ಚಿತ್ರಗಳು ಇರಲಿದೆ.

