ಟಿ.ನರಸೀಪುರ: ನಾಮಫಲಕ ಅಳವಡಿಸುವ ವಿಚಾರದಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೋಕಿನ ತಲಕಾಡು ಗ್ರಾಮದಲ್ಲಿ ಮಾತಿನ ಚಕಮಕಿ ನಡೆದಿದೆ. ಮಧ್ಯೆ ಪ್ರವೇಶಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗಗಳ ನಡುವೆ ಬೋರ್ಡ್ ನೆಡುವ ವಿಚಾರಕ್ಕೆ ಗಲಾಟೆಯಾಗಿದೆ. ನಾಯಕ ಜನಾಂಗಕ್ಕೆ ಸೇರಿದ ಜಾಗದಲ್ಲಿ ಅಂಬೇಡ್ಕರ್ ಭಾವಚಿತ್ರದ ಬೋರ್ಡ್ ಅಳವಡಿಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಅಂಬೇಡ್ಕರ್ ಭಾವಚಿತ್ರದ ಬೋರ್ಡ್ ಅಳವಡಿಕೆ ಮಾಡಿರುವ ಜಾಗದಲ್ಲಿ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರ ಜೊತೆ ನಾಯಕ ಜನಾಂಗದ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ.

ಖಾಕಿ ಮಾತನ್ನು ಲೆಕ್ಕಿಸದ ಯುವಕರು ಅಂಬೇಡ್ಕರ್ ಭಾವಚಿತ್ರದ ಬೋರ್ಡ್ ನ ಪಕ್ಕದಲ್ಲಿ ಮದಕರಿ ಭಾವಚಿತ್ರವಿರುವ ಬೋರ್ಡ್‌ ನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.