ಮೈಸೂರು: ಸಿಎಂ ಬದಲಾವಣೆ ಗೊಂದಲ ವಿಚಾರವಾಗಿ ಮೈಸೂರಿನಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಪತ್ರ ಚಳುವಳಿ ನಡೆಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಪತ್ರ ಚಳುವಳಿಯನ್ನು ಅಹಿಂದ ಸಂಘಟನೆಗಳು ನಡೆಸಿದರು. ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಬೇಕು. ಸಿಎಂ ಬದಲಾವಣೆಯ ಗೊಂದಲವನ್ನು ಸರಿಪಡಿಸಬೇಕು ಎಂದು ರಾಹುಲ್ ಗಾಂಧಿಗೆ ಪತ್ರ ಬರೆದು ಚಳುವಳಿ ನಡೆಸಲಾಯಿತು.

