ಮೈಸೂರು: ಮುಡಾ 50:50 ಹಗರಣ ವಿಚಾರವಾಗಿ ಕೋರ್ಟ್ ವಿಚಾರಣೆ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸತ್ಯ ಮರೆ ಮಾಚಲು ಸಾಧ್ಯವಿಲ್ಲ. ಕೋರ್ಟ್ನಲ್ಲಿ ನಾನೇ ವಾದ ಮಂಡಿಸಿದ್ದೇನೆ. ಒಂದು ಕಡೆ ಸಿಎಂ ಪತ್ನಿ ಪಾರ್ವತಿ ಅವ್ರಿಗೆ ಅಕ್ರಮವಾಗಿ ಸೈಟ್ ನೀಡಲಾಗಿದೆ. ಇದರಿಂದ ಮುಡಾಗೆ ಆರ್ಥಿಕ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಮತ್ತೊಂದು ಕಡೆ ಆರೋಪಿಗಳ ಪಾತ್ರ ಇಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಕೋರ್ಟ್ ಸ್ಪಷ್ಟೀಕರಣ ಕೊಡುವಂತೆ ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ತನಿಖಾಧಿಕಾರಿ ಸಿಎಂ ಪ್ರಭಾವಕ್ಕೆ ಒಳಗಾಗಿ ವರದಿ ನೀಡಿದ್ದಾರೆ. ತನಿಖಾಧಿಕಾರಿ ಹೇಳಿದ್ದು, ವರದಿ ಕೊಟ್ಟಿದ್ದು ನಿಜವಲ್ಲ ಎಂದರು.

ಇದೇ 24 ಕ್ಕೆ ಮತ್ತೆ ವಿಚಾರಣೆ ಮುಂದೂಡಲಾಗಿದೆ. ಲೋಕಾಯುಕ್ತ ಏನು ಸ್ಪಷ್ಟೀಕರಣ ಕೊಡುತ್ತಾರೋ ಕೊಡಲಿ. ಅಕ್ರಮ ಆಗಿರೋದು ನಿಜ ಇದನ್ನು ಸಾಬೀತು ಮಾಡೇ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.