ನಂಜನಗೂಡು: ತಗಡೂರು ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಗೌತಮ್ ಯುವಕರ ಸಂಘದ ನಾಮಫಲಕ ಅನಾವರಣ ಮತ್ತು ಸಂಘದ ಉದ್ಘಾಟನಾ ಸಮಾರಂಭವನ್ನು ಬುದ್ಧ , ಬಸವಣ್ಣ, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.

ತಗಡೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನವನ್ನು ಹಂತ ಹಂತವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.

ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಅಂಬೇಡ್ಕರ್ ರವರ ಬಗ್ಗೆ ಲಘುವಾಗಿ ಮಾತನಾಡಿದ್ದು, ದೇಶದ ಜನತೆಯ ಕ್ಷಮೆ ಕೇಳಬೇಕು. ಹೊರಗಡೆ ಅಂಬೇಡ್ಕರನ್ನು ಪೂಜಿಸುತ್ತಾರೆ. ಆದರೆ, ಒಳಗಡೆ ಅಂಬೇಡ್ಕರ್ರವರನ್ನು ವಿರೋಧಿಸಿ ಈಗಲೂ ಕೂಡ ಅಧಿಕಾರವನ್ನು ಅನುಭವಿಸುತ್ತಿರುವ ಕೆಲವು ಮಂದಿಗಳನ್ನು ನಾವು ಗಮನಿಸಬಹುದು.

ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ರವರ ಹೇಳಿಕೆಯನ್ನು ಇದು ಒಂದು ಸಣ್ಣ ಮಾತು ಎಂದು ಸುಮ್ಮನಾದರೆ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮತ್ತೆ ದೊಡ್ಡಮಟ್ಟದ ಮಾತನ್ನು ಆಡುತ್ತಾರೆ. ಅಮಿತ್ ಶಾ ಅವರು ದೇಶದ ಜನತೆಗೆ ಕ್ಷೆಮೆ ಕೇಳಿಕೊಂಡರೆ ಏನು ಆಗುವುದಿಲ್ಲ. ಇವರು ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜು, ಮಾಜಿ ಜಿಪಂ ಸದಸ್ಯ ಬಿ.ಎನ್ ಸದಾನಂದ, ಡಾ. ಡಿ ಜಿ ನಾಗರಾಜು, ಆರ್.ಮಹದೇವ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ರಂಗಸ್ವಾಮಿ, ದೇವಣ್ಣ, ಹೆಚ್.ರಂಗಸ್ವಾಮಿ, ಗ್ರಾಪಂ ಸದಸ್ಯರಾದ ಸರಸ್ವತಿ ಗಾರ್ಡನ್ ಮಹೇಶ್,

ಗೌತಮಿ ಯುವಕರ ಸಂಘದ ಗೌರವಾಧ್ಯಕ್ಷರಾದ ಟಿ.ಜಿ ನವೀನ್ ಕುಮಾರ್, ಎಸ್‌. ಶಂಕರ್, ಅಧ್ಯಕ್ಷ ಬಿ.ಮಹದೇವ, ಉಪಾಧ್ಯಕ್ಷ ಟಿ.ಎಸ್ ಶಿವಕುಮಾರ್, ಕಾರ್ಯದರ್ಶಿ ಟಿಎಂ ಸೋಮೇಶ್, ಖಜಾಂಚಿ ಮಹದೇವಸ್ವಾಮಿ, ಕಾನೂನು ಸಲಹೆಗಾರ ರಂಗನಾಥ್, ಸಂಚಾಲಕರಾದ ಸುರೇಶ್, ಪುಟ್ಟಸ್ವಾಮಿ, ನಿರ್ದೇಶಕರಾದ ಚಂದ್ರಶೇಖರ್, ಜಯಪ್ರಕಾಶ್ ಸೇರಿದಂತೆ ಯುವಕರು ಮಹಿಳೆಯರು ಭಾಗವಹಿಸಿದ್ದರು.