ಮೈಸೂರು: ಹುಣಸೂರು ಹೆದ್ದಾರಿ ಅಂಕನಹಳ್ಳಿ ಗೇಟ್ ಬಳಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಚಿಕ್ಕಾಡಿಗನಹಳ್ಳಿಯ ರವಿ (37) ಅಂಕನಹಳ್ಳಿಯ ಪ್ರಸನ್ನ (42) ಮೃತ ದುರ್ದೈವಿಗಳು. ಬಿಳಿಕೆರೆ ಕಡೆಯಿಂದ ಅಂಕನಹಳ್ಳಿ ಗ್ರಾಮಕ್ಕೆ ಹೊರಟಿದ್ದ ಪಲ್ಸರ್ ಬೈಕ್ ಸವಾರರು
ಮೈಸೂರು ಕಡೆಯಿಂದ ವೇಗವಾಗಿ ಬಿಳಿಕೆರೆ ಕಡೆಗೆ ಬರುತ್ತಿದ್ದ ಬಸ್ ಮುಖಮುಖಿ ಢಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಇಬ್ಬರು ಬಸ್ಸಿನ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

