ಮೈಸೂರು : ರಾಜ್ಯದಲ್ಲಿ ಬೈ ಎಲೆಕ್ಷನ್ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಎರಡು ಕಡೆ ನಾವು ಗೆಲ್ಲುತ್ತೇವೆ. ನಾನು ಕೂಡ ಪ್ರವಾಸ ಹೋಗುತ್ತಿದ್ದೇನೆ. ಬಾಗಲಕೋಟೆ, ದಾವಣಗೆರೆ ಎಲ್ಲಾ ಕಡೆ ಹೋಗುತ್ತೇನೆ ಎಂದರು.

ಬೈ ಎಲೆಕ್ಷನ್ ಮುಂದಿನ ಚುನಾವಣೆಯ ದಿಕ್ಸೂಚಿನಾ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಬಿಜೆಪಿ ಇದ್ದಾಗ ನಾವು ಬೈ ಎಲೆಕ್ಷನ್ ಗೆದ್ದಿದ್ದೇವೆ. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ಅದು ದಿಕ್ಸೂಚಿನಾ ನೀವೇ ಹೇಳಬೇಕು. ಯಾವ ಎಲೆಕ್ಷನ್ ಅದ್ರು ನಾವೇ ಗೆಲ್ಲುತ್ತೇವೆ. 2028 ರಲ್ಲೂ ನಾವೇ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಕೂಡ ಯಾವ ಗೊಂದಲ ಇಲ್ಲ. ಎಲ್ಲವೂ ಕೂಡ ಸರಿಯಾಗಿದೆ ಎಂದರು.