ಮೈಸೂರು : ಸಿಎಂ ಸಿದ್ದರಾಮಯ್ಯ ದಸರಾ ದೀಪಾಲಂಕಾರ ವೀಕ್ಷಣೆ ಮಾಡಿದರು.  ಅಂಬಾರಿ ಬಸ್ ಏರಿ ವಿದ್ಯುತ್ ದೀಪಾಲಂಕಾರವನ್ನು ಸಿಎಂ ವೀಕ್ಷಿಸಿದರು.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ವರ್ಣರಂಜಿತಾ ವಿದ್ಯುತ್ ದೀಪಗಳ ವಿನ್ಯಾಸ ನೋಡಿ ಸಿದ್ದರಾಮಯ್ಯ ಫುಲ್ ಖುಷಿ ಆದರು. ಅರಮನೆ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ರಾಮಸ್ವಾಮಿ ವೃತ್ತ, ಜಂಬೂಸವಾರಿ ಸಾಗುವ ಮಾರ್ಗಗಳು ಸೇರಿ ನಗರದ ತುಂಬೆಲ್ಲಾ ವಿದ್ಯುತ್ ದೀಪಗಳ ಚಿತ್ತಾರದಿಂದ ಕಂಗೊಳಿಸಿತು.

ನಗರದ ಪ್ರಮುಖ ರಸ್ತೆಗಳು ವೃತ್ತಗಳಲ್ಲಿ ಆಕರ್ಷಕ ಪ್ರತಿಕೃತಿಗಳು ಇದ್ದವು. ದಸರಾ ದೀಪಾಲಂಕಾರವನ್ನು ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್.ಸಿ ಮಹದೇವಪ್ಪ ಸೇರಿ ಗಣ್ಯರು ಕಣ್ತುಂಬಿಕೊಂಡರು.