ಮೈಸೂರು : ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ವಿಚಾರವಾಗಿ, ಮೋದಿ ಸರ್ಕಾರಕ್ಕೆ ಸಿಎಂ ಸೊನ್ನೆ ಮಾರ್ಕ್ಸ್ ನೀಡಿದ್ದಾರೆ. ಅಚ್ಛೇ ದಿನ ಆಯೇಗಾ ಅಂದ್ರಲ್ಲಾ ಏನಾಯ್ತು. ಪ್ರತಿ ವರ್ಷ ಉದ್ಯೋಗ ಕೊಡ್ತೀನಿ ಅಂದ್ರಲ್ಲ ಏನಾಯ್ತು. ರೈತರ ಸಮಸ್ಯೆ ಬಗೆ ಹರಿಸಿದ್ರ ಇಲ್ಲ. ರೈತರು ಯಾಕೆ ಚಳುವಳಿ ಮಾಡಿದ್ರು ಎಂದರು.
ಮೋದಿ ಏನ್ ಹೇಳಿದ್ರು ಅದು ಯಾವುದನ್ನೂ ಮಾಡಲಿಲ್ಲ. ಮೋದಿಗೆ ಮೀಡಿಯಾದವರು ಹೆಚ್ಚು ಪ್ರಚಾರ ಕೊಡ್ತಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನ ಕೊಡಲಿಕ್ಕೆ ಆಗಲ್ಲ ಅಂದ್ರು. ಈಗ ಅವರೇ ನಮ್ಮ ಯೋಜನೆಯನ್ನ ಕಾಪಿ ಮಾಡಿದ್ದಾರೆ ಎಂದರು.
ಗುಜರಾತ್ ಸಿಎಂ ಆಗಿದ್ದಾಗ 50% ಟ್ಯಾಕ್ಸ್ ವಾಪಾಸ್ ನೀಡಬೇಕು ಅಂದ್ರು. ಪಿಎಂ ಆದ ಬಳಿಕ ಇವರು ಮಾಡಿದ್ದೇನು. ನಿರ್ಮಲಾ ಸೀತಾರಾಮನ್ ಅನುದಾನ ಕೊಡ್ತೀನಿ ಅಂದ್ರು ಕೊಟ್ರಾ. ಬಿಜೆಪಿಯವರು ಇದನ್ನ ಕೇಳಿ ಅಂದ್ರೆ ಕೇಳ್ತಿಲ್ಲ. ಜನರಿಗೆ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

