ನಂಜನಗೂಡು: ಸ್ವಚ್ಛತೆಯ ಮೂಲಕ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರು ನಮ್ಮ ನಿಜವಾದ ಹೀರೋಗಳು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಬಣ್ಣಿಸಿದರು.

ನಂಜನಗೂಡು ನಗರದ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಮೈಸೂರು, ನಗರಾಭಿವೃದ್ಧಿ ಕೋಶ, ನಂಜನಗೂಡು ನಗರಸಭಾ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತಿದ್ದಾರೆ.

ನಾವು ಪ್ರತಿದಿನ ಒಣ ಕಸ, ಹಸಿ ಕಸ, ತ್ಯಾಜ್ಯಗಳನ್ನು ಬೇರ್ಪಡಿಸಿ ನಾವು ಕೂಡ ಅವರಿಗೆ ಸಹಾಯ ಮಾಡಬೇಕಾಗಿದೆ. ಗ್ರಾಮಗಳು ಮತ್ತು ದೊಡ್ಡ ದೊಡ್ಡ ನಗರಗಳ ಪ್ರದೇಶಗಳು ಸುಂದರವಾಗಿ ಕಾಣುತ್ತವೆ ಎನ್ನುವುದಕ್ಕೆ ಪೌರಕಾರ್ಮಿಕರು ಕಾರಣ ಅವರನ್ನು ನಾವು ಗೌರವಿಸಬೇಕು ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ಸಹಾಯಧನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ನಗರಸಭಾ ಪೌರಯುಕ್ತ ವಿಜಯ್, ನಗರಸಭಾ ಸದಸ್ಯರಾದ ಮಹೇಶ್, ಗಂಗಾಧರ್, ಗಾಯತ್ರಿ, ಸಿದ್ದರಾಜು, ಶ್ವೇತಾ ಲಕ್ಷ್ಮೀ, ಸಿದ್ದಿಕ್, ದೇವ, ಸೌಭಾಗ್ಯ, ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್, ಮುಖಂಡರಾದ ಚಲುವರಾಜ್, ಯೋಗೀಶ್, ರಮೇಶ್ , ಬಸವರಾಜ್, ಯೋಗೀಶ್, ರವಿ ರವರು ಸೇರಿದಂತೆ ಹಲವರು ಭಾಗವಹಿಸಿದ್ದರು.