ಮೈಸೂರು : ಮಹಾ ನಗರ ಪಾಲಿಕೆ ಪೀಠೋಪಕರಣಗಳನ್ನು ಕೋರ್ಟ್ ಆದೇಶದಂತೆ ಜಪ್ತಿ ಮಾಡಲು ಕೋರ್ಟ್ ಸಿಬ್ಬಂದಿ ಮುಂದಾಗಿದೆ. ರಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಘಟಕಕ್ಕೆ ಭೂ ಸ್ವಾಧೀನ ಮಾಡಿಕೊಂಡಿದೆ. ವಿವಿಧ ಸರ್ವೆ ನಂಬರ್ ಗಳ ಸುಮಾರು 45 ಎಕರೆ ರೈತರ ಜಮೀನುಗಳ ಭೂ ಸ್ವಾಧೀನ ಮಾಡಿಕೊಂಡಿದೆ. 1994 ರಲ್ಲಿ ಸುಮಾರು 45 ಎಕರೆ ಭೂ ಸ್ವಾಧೀನವಾಗಿದೆ.

ಒಂದು ಎಕರೆಗೆ 45 ಸಾವಿರದಂತೆ ಪರಿಹಾರ ಕೊಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದೆ. ಹೆಚ್ಚಿನ‌ ಪರಿಹಾರಕ್ಕಾಗಿ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದಾರೆ. ಈಗ ಗ್ರಾಮಸ್ಥರ ಪರವಾಗಿ ತೀರ್ಪು ಪ್ರಕಟವಾಗಿದೆ. ಕೋರ್ಟ್ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೊಡಲು ಆದೇಶಿಸಿದೆ. 2021 ರಲ್ಲೇ ಹೆಚ್ಚು ಪರಿಹಾರಕ್ಕಾಗಿ ಕೋರ್ಟ್ ಆದೇಶ ಕೊಟ್ಟಿದ್ದರೂ ಪಾಲಿಕೆ ವಿಳಂಬ ಮಾಡಿದೆ.

ನ್ಯಾಯಾಲಯದ ಆದೇಶವನ್ನು ಪಾಲಿಕೆ ಪಾಲಿಸಲಿಲ್ಲ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡಲು ವಿಳಂಬವಾಗಿದೆ. ಚರ ಮಾಲುಗಳ ಜಪ್ತಿಗೆ ಕೋರ್ಟ್ ಆದೇಶಿಸಿದೆ. ಕೋರ್ಟ್ ಅಮೀನರು, ವಕೀಲರ ಸಮ್ಮುಖದಲ್ಲಿ ಜಪ್ತಿ ಮಾಡಲಾಗಿದೆ. ಮಹಾನಗರ ಪಾಲಿಕೆಗೆ ಕೋರ್ಟ್ ಸಿಬ್ಬಂದಿ ಲಗ್ಗೆ ಇಟ್ಟಿದ್ದಾರೆ. ಎಲ್ಲಾ ಪೀಠೋಪಕರಣಗಳು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡುತ್ತಿದೆ.