ಮೈಸೂರು : ರೋಡ್ ಶೋ ಆರಂಭಕ್ಕೂ ಮುನ್ನಾ ಕಿಕ್ಕಿರಿದು ಜಮಾಯಿಸಿದ್ದ ಕೈ ಕಾರ್ಯಕರ್ತರನ್ನುದ್ದೇಶಿಸಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಷಣ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಬಹಳ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡಿದ್ದೀರ. ನಾನು ಮತ್ತು ಸಿದ್ದರಾಮಯ್ಯ ಅವರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಜನರ ಹೃದಯ ಗೆದ್ದು 136 ಸೀಟು ಗೆದ್ದು ನಿಮ್ಮ ಜನ ಸರ್ಕಾರವನ್ನು ರಚನೆ ಮಾಡಿದ್ದೇವೆ. ಮೈಸೂರಿನ ಅಧಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ದೊಡ್ಡ ಶಕ್ತಿ ಕೊಟ್ಟಿದೆ. ಇಡೀ ದೇಶಕ್ಕೆ ನಾವು ಕೊಟ್ಟ ಗ್ಯಾರಂಟಿ ಮಾದರಿಯಾಗಿದೆ.
ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಕಾರ್ಯಕ್ರಮ ರೂಪಿಸಿದ್ದರು. ಇವೆಲ್ಲಾ ನಮ್ಮ ಸರ್ಕಾರ ರಚನೆಯಾಗುವುದಕ್ಕೆ ಸಹಾಯ ಆಯ್ತು. ಇವತ್ತು ಪಕ್ಷದ ಬೃಹತ್ ಸಭೆಯನ್ನು ಮೈಸೂರಿನಲ್ಲಿ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆವು. ಆದರೆ ಪ್ರಧಾನಿಗಳು ಮೈಸೂರಿಗೆ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಸಭೆ ಮಾಡುವುದು ಬೇಡ ಎಂದು ತೀರ್ಮಾನ ಮಾಡಿದ್ದಾರೆ. ಮುಂದೆ ಈ ಭಾಗದಲ್ಲಿ ಪಕ್ಷದ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಈ ಸರ್ಕಾರ 2 ವರ್ಷದ ಸರ್ಕಾರ ಅಲ್ಲ.
ಮುಂದೆ 2028 ಕ್ಕೆ ನಿಮ್ಮ ಸರ್ಕಾರ ರಾಜ್ಯದಲ್ಲಿ ವಾಪಸ್ಸು ಬರುತ್ತದೆ ಎನ್ನುವ ನಂಬಿಕೆ ಇದೆ. ರಾಜ್ಯದಲ್ಲಿ ಬರಗಾಲ ಸಂದರ್ಭದಲ್ಲಿ ವರುಣನ ಕೃಪೆ ನಮಗೆ ಸಹಕಾರಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿಗೆ 3.5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶ ಇದ್ದರೂ, ವಿರೋಧ ಪಕ್ಷಗಳನ್ನು ಸೇರಿಸಿ ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ಆದರೆ ವರುಣ ಕಾವೇರಿ ಚಾಮುಂಡಿ ಈ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.
ತಾಯಿ ಚಾಮುಂಡಿಗೆ ನಮಸ್ಕಾರ ಮಾಡುತ್ತೇನೆ. ಎಲ್ಲಾ ಕಾರ್ಯಕರ್ತರು ಇದೇ ರೀತಿಯ ಒಗ್ಗಟ್ಟು ಮುಂದುವರೆಸಿಕೊಂಡು ಹೋಗಬೇಕು. ನಾನು ಸಹ ನಿಮ್ಮ ಊರಿನವನು, ನಾನು ನಿಮ್ಮ ಊರಿನ ಆಳಿಯ ನನಗೆ ಕನಕಪುರ ಬೇರೆಯಲ್ಲ,ಮೈಸೂರು ಬೇರೆಯಲ್ಲ. ನಾನು ಮುಖ್ಯಮಂತ್ರಿ ಇರಬಹುದು ಆದರೆ ನಾನು ಯಾವತ್ತಿಗೂ ಮೈಸೂರಿನ ಅಳಿಯ ಎಂದು ಸಿಎಂ ಡಿ ಕೆ ಶಿವಕುಮಾರ್ ಪ್ರತಿಪಾದಿಸಿದರು.

