ಮೈಸೂರು: ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ ಎಂದು ಮೈಸೂರಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಮೈಸೂರಿನ‌ ಚಾಮರಾಜ ಜೋಡಿರಸ್ತೆಯ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳಿಂದಲೇ ಪ್ರೊಟೆಸ್ಟ್ ನಡೆಯಿತು. ಆಸ್ಪತ್ರೆಗೆ ಬೀಗ ಹಾಕಲು ರೋಗಿಗಳು ಯತ್ನಿಸಿದ್ದಾರೆ.

ಡಾ.ಮಹಾಲಕ್ಷ್ಮಿ‌ ವಿರುದ್ಧ ಸಾರ್ವಜನಿಕರು ಸಿಟ್ಟಿಗೆದ್ದರು. ವೈದ್ಯರು ರೋಗಿಗಳ ಜೊತೆ ಸರಿಯಾಗಿ ಸ್ಪಂದಿಸಲ್ಲ. ಚಿಕಿತ್ಸೆ ನೀಡುವ ಬದಲು ರೋಗಿಗಳಿಗೆ ಬಯ್ಯುತ್ತಾರೆ. ಸೌಜನ್ಯದಿಂದ ವರ್ತಿಸದೆ ದುರಹಂಕಾರ ತೋರ್ತಾರೆ ಎಂದು ಕಿಡಿಕಾರಿದರು.

ಸ್ಥಳಕ್ಕೆ ಡಿಎಚ್ಓ ಆಗಮಿಸುವಂತೆ ಬಿಗಿಪಟ್ಟು ಹಿಡಿದರು. ವಿಷಯ ತಿಳಿದು ಆಸ್ಪತ್ರೆ ಬಳಿ ಡಿಎಚ್ ಓ ಕುಮಾರಸ್ವಾಮಿ ಓಡೋಡಿ ಬಂದರು. ಸ್ಥಳೀಯರ ಪ್ರತಿಭಟನೆಗೆ ಆರೋಗ್ಯ ಇಲಾಖೆ ಬೆಚ್ಚಿಬಿದ್ದರು. ತಕ್ಷಣ ವೈದ್ಯರನ್ನ ಬದಲಾಯಿಸುವ ಭರವಸೆ ನೀಡಿದರು. ಆದರೂ ಪ್ರತಿಭಟನೆ ಮಾಡ್ತಿದ್ದ ರೋಗಿಗಳು ಚಿಕಿತ್ಸೆ ಪಡೆಯದೆ ವಾಪಸ್ ಆದರು.